ಹುಡುಗಿಯರ ಕಡೆ ನೋಡಲ್ಲ, ಆಂಟಿಯರು ಸಿಕ್ರೆ ಬಿಡಲ್ಲ !

ಸೋಮವಾರ, 4 ಸೆಪ್ಟಂಬರ್ 2023 (11:34 IST)
ಬೆಂಗಳೂರು : ಮದುವೆ ಆಗಿದ್ದ ಚಂದದ ಆಂಟಿಯರೇ ಈತನ ಟಾರ್ಗೆಟ್, ಹುಡುಗಿಯರ ಕಡೆಗೆ ತಿರುಗಿ ಕೂಡ ನೋಡುತ್ತಿರಲಿಲ್ಲ, ಮದುವೆಯಾದ ಮಹಿಳೆಯರು ಸಿಕ್ಕರೆ ಬಿಡೋ ಪ್ರಶ್ನೇನೇ ಇಲ್ಲ. ಸೋಷಿಯಲ್ ಮೀಡಿಯಾದಲ್ಲಿ ಗಾಳ ಹಾಕ್ತಿದ್ದ, ಖೆಡ್ಡಗೆ ಬೀಳಿಸಿ ಮಾನ ಹರಾಜು ಹಾಕುವುದಾಗಿ ಬೆದರಿಕೆ ಕೂಡ ಹಾಕ್ತಿದ್ದ. ಅಂತಹ ಒಬ್ಬ ಕಾಮುಕ ಪೊಲೀಸರ ಅತಿಥಿಯಾಗಿದ್ದಾನೆ.

ಈಗಂತೂ ಕೆಲವು ಮಹಿಳೆಯರು ಗಂಡ-ಮಕ್ಕಳನ್ನ ಮರೆಮಾಚಿ ಇನ್ನೂ ಮದುವೆನೇ ಆಗಿಲ್ಲ ಅನ್ನೋ ರೇಂಜ್ಗೆ ಚಂದದ ಫೋಟೋಗಳನ್ನ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇಂತಹ ಚಂದದ ಆಂಟಿಯರನ್ನೇ ಟಾರ್ಗೆಟ್ ಮಾಡಿ ಖೆಡ್ಡಗೆ ಬೀಳಿಸಿ, ಮರ್ಯಾದೆ ಹರಾಜು ಹಾಕುವುದಾಗಿ ಬೆದರಿಕೆಯೊಡ್ಡುತ್ತಿದ್ದ ಟೆಕ್ಕಿಯೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. 

ಹೌದು. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದ ಅಸ್ಸಾಂ ಮೂಲದ ಟೆಕ್ಕಿ ಫೈಸಲ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಫೈಸಲ್ ಇನ್ಸ್ಟಾಗ್ರಾಮ್, ಫೇಸ್ಬುಕ್ನಲ್ಲಿ ನಕಲಿ ಖಾತೆ ಓಪನ್ ಮಾಡುತ್ತಿದ್ದ. ಈ ನಕಲಿ ಖಾತೆ ಮೂಲಕ ಮದುವೆ ಆಗಿರೋ ಚೆಂದದ ಆಂಟಿಯರನ್ನ ಟಾರ್ಗೆಟ್ ಮಾಡಿ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದ.

ಇದಾದ ಕೆಲ ದಿನಗಳ ನಂತರ ಆ ಆಂಟಿಯರಿಗೆ ಕರೆ ಮಾಡ್ತಿದ್ದ ಟೆಕ್ಕಿ ಫೈಸಲ್, ಪದೇ ಪದೇ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ, ಆಮೇಲೆ ಲಕ್ಷ ಲಕ್ಷ ಹಣ ಕೇಳೋಕೆ ಶುರುಮಾಡ್ತಿದ್ದ. ಗಾಬರಿಯಾದ ಆಂಟಿಯರು, ನಾನ್ ಹಣ ಕೊಡಲ್ಲ, ಬರೋದು ಇಲ್ಲ ಅಂತಾ ಅಂದ್ರೆ ದೈಹಿಕ ಸಂಪರ್ಕದ ವೀಡಿಯೋ ಕಳಿಸಿ ನಿನ್ನ ಗಂಡನಿಗೆ ಕಳಿಸ್ತೀನಿ. ಸೋಷಿಯಲ್ ಮೀಡಿಯಾದಲ್ಲಿ ಮಾನ ಹರಾಜು ಹಾಕ್ತೀನಿ ಅಂತಾ ಬೆದರಿಕೆ ಹಾಕ್ತಿದ್ದ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ