ಯುವತಿ ಕಿಡ್ನ್ಯಾಪ್ ಆರೋಪಿ ಅರೆಸ್ಟ್​

ಮಂಗಳವಾರ, 29 ಆಗಸ್ಟ್ 2023 (15:00 IST)
ಹಾಡಹಗಲೇ ಸಿನಿಮೀಯ ಶೈಲಿಯಲ್ಲಿ ಯುವತಿಗೆ ಚಾಕು ಹಾಕಿ ಕಿಡ್ನ್ಯಾಪ್ ಮಾಡಿದ ಘಟನೆ ರಾಮನಗರದ ಸರ್ಕಾರಿ ಮಹಿಳಾ ಕಾಲೇಜು ಬಳಿ ನಡೆದಿದೆ. ಸಂಜನಾ ಕಿಡ್ನಾಪ್ ಆದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಇನ್ನೋವಾ ಕಾರಿನಲ್ಲಿ ಅಪಹರಣ ಮಾಡುವ ಮೊದಲು ಯುವತಿಯ ಕೈ ಹಾಗೂ ಬುಜದ ಭಾಗಕ್ಕೆ ಚಾಕು ಇರಿದು, ಬಳಿಕ ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡು ಎಸ್ಕೇಪ್​ ಆಗಿದ್ದಾರೆ. ಅಪಹರಣ ಮಾಡಿಕೊಂಡು ಹೋದ ಕಾರಿನ ಜಾಡು ಇಡಿದ ಪೋಲಿಸರು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಾರನ್ನು ಚೇಸ್ ಮಾಡಿದ್ದಾರೆ. ನಂತರ ದಾಳಿಂಬ ಎಂಬ ಯುವಕನನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ. ಯುವತಿಗೆ ರಾಮನಗರದ ರಾಮಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು ಆಸ್ಪತ್ರೆಗೆ ಎಸ್​ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಯುವತಿಯ ಆರೋಗ್ಯ ವಿಚಾರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ