ಲವ್ ಮಾಡಬೇಡ ಅಂದ್ರೆ ಪೊಲೀಸ್ ಆಗಿದ್ದ ತಾಯಿಯನ್ನೇ ಕೊಂದ ಮಗಳು

ಶನಿವಾರ, 15 ಫೆಬ್ರವರಿ 2020 (17:40 IST)

ಮಹಿಳಾ ಹೆಡ್ ಕಾನ್ಸಟೇಬಲ್ ಒಬ್ಬರು ತಾವು ಹೆತ್ತ ಮಗಳಿಂದಲೇ ಕೊಲೆಯಾಗಿದ್ದಾರೆ.
 

ಮಗಳಿಂದ ಕೊಲೆಯಾಗಿರೋ ಹೆಡ್ ಕಾನ್ಸಟೇಬಲ್ ಹೆಸರು ಶಶಿ ಶುಕ್ಲಾ ಅಂತ. ದೆಹಲಿಯ ಬ್ರಿಜ್ ವಿಹಾರ ಠಾಣೆಯಲ್ಲಿ ಕೆಲಸ ಮಾಡ್ತಿದ್ರು.

ತಮ್ಮ ಅಪ್ರಾಪ್ತ ಮಗಳನ್ನು ಹುಡುಗನೊಬ್ಬ ಲವ್ ಮಾಡ್ತಿದ್ದ. ಹೀಗಾಗಿ ಓದೋ ವಯಸ್ಸಲ್ಲಿ ಲವ್ ಮಾಡಬೇಡ ಅಂತ ತಾಯಿ ಶಶಿ ಶುಕ್ಲಾ ಆಗಾಗ್ಗೆ ಮಗಳಿಗೆ ಎಚ್ಚರಿಕೆ ನೀಡುತ್ತಲೇ ಇದ್ದರು.

ಆದರೆ ತಾಯಿ ಮೇಲೆಯೇ ಮಗಳು ಕೋಪಗೊಂಡು ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ.

ಇದೀಗ ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧನ ಮಾಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ