ಅಂತಾರಾಷ್ಟ್ರೀಯ ಪ್ರಶಿಕ್ಷಣಾರ್ಥಿಗಳ ಅಧ್ಯಯನ ತಂಡ ಭೇಟಿ ನೀಡಿದ್ದೆಲ್ಲಿಗೆ ಗೊತ್ತಾ?

ಬುಧವಾರ, 5 ಡಿಸೆಂಬರ್ 2018 (20:15 IST)
ಕೊಡಗು ಜಿಲ್ಲೆಯ ಪಾಲಿಬೆಟ್ಟ ಗ್ರಾಮ ಪಂಚಾಯಿತಿಗೆ  ಅಂತಾರಾಷ್ಟ್ರೀಯ ಪ್ರಶಿಕ್ಷಣಾರ್ಥಿಗಳ ಅಧ್ಯಯನ ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ರಾಜ್ಯದಲ್ಲಿ ಗ್ರಾಮೀಣ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧ್ಯಯನ ನಡೆಸಲು ಆಫ್ರಿಕಾ, ಶ್ರೀಲಂಕಾ, ನೈಜೀರಿಯಾ, ಕೀನ್ಯಾ, ಉಗಾಂಡ, ಇರಾಕ್, ಸೌತ್ ಆಫ್ರಿಕಾ, ಬಾಂಗ್ಲಾದೇಶ, ತಾಜ್ಜೆಕಿಸ್ತಾನ್, ಬೋಟ್ನಾಸ್,  ಈಜಿಪ್ಟ್, ಮೌರಿಶ್ಯಸ್, ಸುಡಾನ್ , ಕಾಂಗೊ, ಅಲ್ಜೀರಿಯ,  ನಮೀಬಿಯಾ ರಾಷ್ಟ್ರಗಳ  24 ಹಿರಿಯ ಅಧಿಕಾರಿಗಳು ನ್ಯಾಷನಲ್ ಇನ್ಸ್ಟ್ಯೂಟ್ ಆಫ್ ರೂರಲ್ ಡವಲಪ್ಮೆಂಟ್ ಹೈದ್ರಾಬಾದ್ ಪ್ರಾಯೋಜಿತ ಅಧ್ಯಯನ ತಂಡದಲ್ಲಿ ಭಾಗವಹಿಸಿದ್ದರು.  

 ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳ ಮೂಲಕ ಸಾಧನೆ ಮಾಡಿ ರಾಜ್ಯ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಪ್ಲಾಸ್ಟಿಕ್ ನಿರ್ಮೂಲನೆ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ಶುದ್ಧ ಕುಡಿಯುವ ನೀರಿನ ಘಟಕ, ಡಿಜಿಟಲ್ ಲೈಬ್ರರಿ, ಇ ಆಡಳಿತ, ತೆರಿಗೆ ವಸೂಲಾತಿ, ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಸಾಧನೆ ಮಾಡಿರುವ ಪಾಲಿಬೆಟ್ಟ ಗ್ರಾಮ ಪಂಚಾಯಿತಿಯಾಗಿದೆ.

ಅಧ್ಯಯನ ತಂಡದಲ್ಲಿ ಆಗಮಿಸಿದ ವಿವಿಧ  ರಾಷ್ಟ್ರಗಳ ಹಿರಿಯ ಅಧಿಕಾರಿಗಳು ಗ್ರಾಮ ಪಂಚಾಯಿತಿ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ