ಮುಸ್ಲಿಮರ ವೋಟು ಬೇಡ ಎಂದ ಅನಂತಕುಮಾರ್ ಹೆಗಡೆ ಈಗ ಮಾಡುತ್ತಿರುವುದೇನಂತೆ ಗೊತ್ತಾ?

ಶುಕ್ರವಾರ, 29 ಮಾರ್ಚ್ 2019 (10:18 IST)
ಶಿರಸಿ : ಮುಸ್ಲಿಮರ ವೋಟು ಬೇಡ ಎಂದ ಸಚಿವ ಅನಂತಕುಮಾರ್ ಹೆಗಡೆ ಈಗ ಅವರ ಓಲೈಕೆಯಲ್ಲಿ ತೊಡಗಿದ್ದಾರೆ ಎಂದು ಜೆಡಿಎಸ್ ಅಲ್ಪ ಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಾಫ್ ಮಿರ್ಜಾನಕರ್ ವ್ಯಂಗ್ಯವಾಡಿದ್ದಾರೆ.


ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,’ ಮುಸ್ಲಿಮರ ವೋಟು ಬೇಡ ಎಂದ ಸಚಿವ ಅನಂತಕುಮಾರ‍ ಹೆಗಡೆ ಈಗ ಮುಸ್ಲಿಂ ಮುಖಂಡರ ಮನೆಗೆ ಭೇಟಿ ನೀಡಿ ಅವರಿಗೆ ಪಕ್ಷದಲ್ಲಿ ಹುದ್ದೆ ನೀಡುವುದಾಗಿ ಆಸೆ ತೋರಿಸಿ ಪಂಚಾಯತಿ ಮಾಡ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.


5 ಬಾರಿ ಸಂಸದರಾಗಿದ್ದರೂ ಹೆಗಡೆ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಿಲ್ಲ. ಸ್ವತಃ ಬಿಜೆಪಿಯವರೇ ಇದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಕೇವಲ ಗಲಾಟೆ ಮಾಡಿಸುವುದು, ಇಲ್ಲ ಸಲ್ಲದ ಹೇಳಿಕೆ ನೀಡುವುದು ಅವರ ಕೆಲಸವಾಗಿದೆ. ಜಿಲ್ಲೆಗೆ ಅಭಿವೃದ್ಧಿ ಹರಿಕಾರರ ಅಗತ್ಯವಿದೆ. ಅದಕ್ಕಾಗಿ ದೋಸ್ತಿ ಸರ್ಕಾರದ ಅಸ್ನೋಟಿಕರ್ ಗೆ ಬೆಂಬಲ ನೀಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ