ಮಹಿಳೆಯರನ್ನು ಚದುರಿಸಿ ಶಾಸಕ ಮಾಡಿದ್ದೇನು ಗೊತ್ತಾ?

ಬುಧವಾರ, 6 ಫೆಬ್ರವರಿ 2019 (20:58 IST)
ಅಲ್ಲಿ ಶಾಸಕರನ್ನು ಮಹಿಳೆಯರು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆಗ ಮಹಿಳೆಯರನ್ನು ಪೊಲೀಸರು ಚದುರಿಸಿದರು. ಅಷ್ಟರಲ್ಲಿ ಶಾಸಕರು ಉದ್ಘಾಟಿಸಿಯೇ ಬಿಟ್ಟಿದ್ದರು. ಇದು ಏನ್ ವಿಷ್ಯ ಗೊತ್ತಾ?

ಶುದ್ದ ಕುಡಿಯುವ ನೀರು ಘಟಕದಲ್ಲೂ ರಾಜಕೀಯ ಮಾಡುತ್ತೀರಾ? ಎಂದು ಶಾಸಕರನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡರು. ಮೊದಲು ಪೂಜೆ ಮಾಡಿ ಮುಗಿಸುತ್ತೇನೆ. ನಂತರ  ಮಾತನಾಡೋಣ ಎಂದು ಶಾಸಕರು ಹೇಳಿದರು. ಆಗ ಅಲ್ಲಿದ್ದ ಮಹಿಳೆಯರನ್ನು ಪೊಲೀಸರು ಚದುರಿಸಿದರು. ಆ ಕೂಡಲೇ ಶಾಸಕರು ಉದ್ಘಾಟನೆ ಮಾಡಿಯೇ ಬಿಟ್ಟರು.
ಇಂತಹದೊಂದು ಬೆಳವಣಿಗೆ ಮಳವಳ್ಳಿಯಲ್ಲಿ ನಡೆದಿದೆ.

ಮಹಿಳೆಯರ ಆಕ್ರೋಶಕ್ಕೆ‌ ಕಾರಣವಾಗಿದ್ದ  ಶುದ್ಧ ಕುಡಿಯುವ ನೀರು ಘಟಕ ಕೊನೆಗೂ ಉದ್ಘಾಟನೆಯ ಭಾಗ್ಯ ಕಂಡಿದೆ. ಮಳವಳ್ಳಿ ತಾಲ್ಲೂಕಿನ ಕುಂತೂರು ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ರಾಜಕೀಯ ಹೋರಾಟಕ್ಕೆ ಕಾರಣವಾಗಿತ್ತು. ಕೊನೆಗೂ ಪೊಲೀಸರ ಸರ್ಪಗಾವಲಿನಲ್ಲಿ ಶಾಸಕ ಡಾ.ಅನ್ನದಾನಿ ಉದ್ಘಾಟನೆ ಮಾಡಿದರು.

ತಾಲ್ಲೂಕಿನ ಕುಂತೂರು ಗ್ರಾಮಕ್ಕೆ ತೆರಳುದಿದ್ದಂತೆ ಅಲ್ಲಿನ ಮಹಿಳೆಯರು  ಈ ಹಿಂದೆ  ಕುಂತೂರು ಗ್ರಾಮದ  ಶುದ್ದ ಕುಡಿಯುವ ನೀರು ವಿಚಾರವಾಗಿ  ಎಇಇ ಸೋಮಶೇಖರ್ ರವರು ಉದ್ಘಾಟನೆಯಾಗಿಲ್ಲ ಎಂದಾಗ ಬೀಗ ಜಡಿದ ಬಗ್ಗೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದರು. 

ಈ ಜಾಗವನ್ನು ಕುಡಿಯುವ ನೀರಿಗಾಗಿ ದಾನ ನೀಡಿದ್ದಾರೆ.  ಆದರೂ ಬೀಗ ಏಕೆ ಹಾಕಿದರು? ಎಂದು ಗ್ರಾಮದ ಮಹಿಳೆಯೊಬ್ಬರು ಶಾಸಕರನ್ನು ಪ್ರಶ್ನಿಸಿದರು. ತರಾತುರಿಯಲ್ಲಿ ಘಟಕ ಉದ್ಘಾಟನೆಯಾಯಿತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ