ಅತೃಪ್ತ ಶಾಸಕರಿಗೆ ಬೆಂಬಲ: ಸಾಮೂಹಿಕ ರಾಜೀನಾಮೆ?

ಬುಧವಾರ, 6 ಫೆಬ್ರವರಿ 2019 (20:37 IST)
ಅತೃಪ್ತ ಶಾಸಕರಲ್ಲಿ ಗುರುತಿಸಿಕೊಂಡಿರುವವರ ಬೆಂಬಲಕ್ಕೆ ನಿಂತಿರುವ ಜನಪ್ರತಿನಿಧಿಗಳು ಸಾಮೂಹಿಕ ರಾಜೀನಾಮೆಗೆ ಸಿದ್ಧವಾಗಿದ್ದಾರೆ.

ಅತೃಪ್ತ ಶಾಸಕ ಕೆ. ಸುಧಾಕರ್ ಬೆಂಬಲಕ್ಕೆ ನಿಂತ ಚಿಕ್ಕಬಳ್ಳಾಪುರ ಜನ ಪ್ರತಿನಿಧಿಗಳು ಈಗ ಸಾಮೂಹಿಕ ರಾಜೀನಾಮೆಗೆ ಸಿದ್ಧತೆ ನಡೆಸಿದ್ದಾರೆ.

ಚಿಕ್ಕಬಳ್ಳಾಪುರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರಳ ಕುಂಟೆ ಕೃಷ್ಣಮೂರ್ತಿ, ಕೆ.ವಿ.ನಾಗರಾಜ್, ನಗರಸಭೆ ಸದಸ್ಯ ಎಸ್.ಎಂ.ರಫೀಕ್,ಶಾಸಕ ಡಾ.ಕೆ.ಸುಧಾಕರ್ ತಂದೆ ಹಾಗೂ ಜಿ.ಪಂ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ನಗರಸಭೆ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು. ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯರು, ಗ್ರಾ.ಪಂ.ಸದಸ್ಯರು, ಡಿಸಿಸಿಬ್ಯಾಂಕ್, ಪಿಎಲ್ ಡಿ ಬ್ಯಾಂಕ್, ಟಿಎಪಿಸಿಎಂಎಸ್, ಎಪಿಎಂಸಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು  ಸಾಮೂಹಿಕ ರಾಜಿನಾಮೆಗೆ ಮುಂದಾಗಿದ್ದಾರೆ.

ಡಾ.ಕೆ.ಸುಧಾಕರ್ ರವರಿಗೆ ಸಮಿಶ್ರ ಸರ್ಕಾರದಲ್ಲಿ ಎರಡನೆ ಬಾರಿ 33 ಸಾವಿರ ಮತಗಳ ಅಂತರದಿಂದ ಆಯ್ಕೆಯಾದರೂ ಸಹ ಮಂತ್ರಿಗಿರಿ ನೀಡಿಲ್ಲ. ಪರಿಸರ ಮಂಡಳಿಗೆ ನೇಮಕ ಮಾಡಿ 50 ದಿನಗಳಾದರೂ ಅವರಿಗೆ ನೇಮಕಾತಿ ಆದೇಶ ನೀಡಿಲ್ಲ. ಹೀಗಾಗಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ