ಈ ರೈತರ ಚಿತ್ತ ಯಾವ ಬೆಳೆಯತ್ತ ಹರಿದಿದೆ ಗೊತ್ತಾ?

ಮಂಗಳವಾರ, 7 ಜುಲೈ 2020 (19:14 IST)
ಅರೆ ಮಲೆನಾಡು  ಜಿಲ್ಲೆಯ ರೈತರು ಮೆಕ್ಕೆಜೋಳ, ಅಡಿಕೆ, ತೆಂಗು ಮುಂತಾದ  ಸಾಂಪ್ರದಾಯಿಕ ಬೆಳೆಗಳಿಂದ ವಿಮುಖರಾಗುತ್ತಿದ್ದಾರೆ.

ದಾವಣಗೆರೆ ಜಿಲ್ಲೆಯ ರೈತರು ಔಷಧ ಸಸ್ಯ ಸೇರಿ ಹೊಸ ಪ್ರಯೋಗದ ತೋಟಗಾರಿಕೆಗೆ ತೆರೆದುಕೊಳ್ಳುತ್ತಿದ್ದಾರೆ.
ಆತ್ಮನಿರ್ಭರ ಯೋಜನೆಯಡಿ ಕೋವಿಡ್-19 ಪ್ಯಾಕೇಜ್‌ ಆಗಿ ಪ್ರಧಾನ ಮಂತ್ರಿಗಳು  20 ಲಕ್ಷ ಕೋಟಿ ರೂಪಾಯಿಗಳನ್ನು ಔಷಧ ಸಸ್ಯ ಬೆಳೆಯುವ ರೈತರಿಗೆ ಸಹಾಯಧನ ನೀಡುವುದಾಗಿ ಘೋಷಿಸಿರುವುದು ಶತಾವರಿ ಬೆಳೆಗಾರರ ಆಸಕ್ತಿಯನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.

ಶತಾವರಿ ಎಂಬ ನೂರು ರೋಗಗಳಿಗೆ ಮದ್ದಾಗಿ ಬಳಸುವ ಆಯುರ್ವೇದಿಕ್‌ ಸಸ್ಯಗಳನ್ನು ಬೆಳೆಯುವತ್ತ ರೈತರು ಇದೀಗ ಗಮನ ಹರಿಸಿದ್ದಾರೆ. ರಸಗೊಬ್ಬರ ಬಳಕೆ ಇಲ್ಲದೆ ಬೆಳೆಯುವ ಈ ಬೆಳೆಯಿಂದ ಮಣ್ಣಿನ ಆರೋಗ್ಯ ಕಾಪಾಡಬಹುದಾಗಿದೆ.

ತುಂಗಭದ್ರಾ ನದಿ ದಂಡೆಯ ಈ ಜಿಲ್ಲೆಯ ನೂರಾರು  ರೈತರು  60 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಶತಾವರಿ  ಬೆಳೆದು ದೇಶದ ಗಮನ ಸೆಳೆದಿದ್ದಾರೆ. ಶತ ಎಂದರೇನೆ ನೂರು, ಇದನ್ನು ನೂರು ರೋಗಗಳ ಔಷಧಿಗಳಿಗೆ ಬೇಸಿಕ್‌ ಇನ್‌ಗ್ರೇಡಿಯೆಂಟ್‌ ಆಗಿ ಬಳಸಲಾಗುತ್ತದೆ. 18 ತಿಂಗಳಿಗೆ ಬೆಳೆ ಕಟಾವಿಗೆ ಬರಲಿದೆ.

ಮಧ್ಯಪ್ರದೇಶದ ಮಾತಿ ತತ್ವ ಅಗ್ರೋ ಇಂಡಸ್ಟ್ರಿ ಎಂಬ ಸಂಸ್ಥೆ ಜಿಲ್ಲೆಯಲ್ಲಿ ಈ ಬೆಳೆ ಬೆಳೆಯಲು ತಾಂತ್ರಿಕ ನೆರವು ನೀಡುತ್ತಿದ್ದು, ಇದೇ ಕಂಪನಿಯೇ ಉತ್ಪನ್ನವನ್ನು ಖರೀದಿಸಲಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ