ಪರಪುರುಷನ ಜೊತೆ ಅನೈತಿಕ ಸಂಬಂಧ ಬೆಳೆಸಿದ ವಿವಾಹಿತ ಮಗಳಿಗೆ ತಂದೆ ಮಾಡಿದ್ದೇನು ಗೊತ್ತಾ?
ಬುಧವಾರ, 1 ಜುಲೈ 2020 (10:31 IST)
ಲಕ್ನೋ : ಮದುವೆಯಾದ ಅಪ್ರಾಪ್ತ ಮಗಳು ಪರಪುರುಷನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಕ್ಕೆ ತಂದೆಯೇ ಆಕೆಯ ನಾಲಿಗೆ ಕತ್ತರಿಸಿ ಕೊಂದ ಘಟನೆ ಉತ್ತರ ಪ್ರದೇಶದ ಬಹ್ರೇಚ್ ಜಿಲ್ಲೆಯಲ್ಲಿ ನಡೆದಿದೆ.
ಸುಭಾಷ್ ಮಗಳನ್ನು ಕೊಂದ ತಂದೆ. ಈತನ 17 ವರ್ಷದ ಮಗಳಿಗೆ ಇತ್ತೀಚೆಗೆ ಮದುವೆಯಾಗಿತ್ತು. ಆದರೆ ಆಕೆ ಪತಿಯ ಮನೆ ಬಿಟ್ಟು ತಂದೆಯ ಮನೆಯಲ್ಲಿ ವಾಸವಾಗಿದ್ದು, ಬೇರೆ ಯುವಕನ ಜೊತೆ ಸೆಕ್ಸ್ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ ತಂದೆ ತನ್ನ ಮಗಳ ನಾಲಿಗೆ ಕತ್ತರಿಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಈ ಬಗ್ಗೆ ದೂರು ದಾಖಲಾದ ಹಿನ್ನಲೆಯಲ್ಲಿ ಆರೋಪಿ ತಂದೆಯನ್ನು ಬಂಧಿಸಿ ಜೈಲಿಗೆ ಕಲುಹಿಸಲಾಗಿದೆ.