ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವದ ಸ್ಮಾರಕ ನಿರ್ಮಾಣವಾಗಿದ್ದೆಲ್ಲಿ ಗೊತ್ತಾ?
ಬಳ್ಳಾರಿಯ ಗಾಂಧಿಭವನದ ಮುಂದೆ 70 ನೇ ಸ್ವಾತಂತ್ಯ ದಿನಾಚರಣೆಯ ಹಿನ್ನಲೆಯಲ್ಲಿ ಪ್ರಜಾ ಪ್ರಭುತ್ವ ಮಾದರಿಯನ್ನು ನಿರ್ಮಿಸಲಾಗಿದೆ. ಇತಿಹಾಸವನ್ನು ಮುಂದಿನ ಪೀಳಿಗೆ ತಿಳಿಸುವ ನಿಟ್ಟಿನಲ್ಲಿ ಸ್ಮಾರಕದ ನಿರ್ಮಾಣವನ್ನು ಬೆಳಗಾವಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಗಾಂಧಿವಾಧಿ 97 ವರ್ಷದ ಗಂಗಪ್ಪ ಮುದ್ದಪ್ಪ ಮಾಳಿಗಿ ಅಗಸ್ಟ್ 9 ರಂದು ಉದ್ಟಾಟಿಸಲಿದ್ದಾರೆ. ಹೀಗಂತ ಗಾಂಧಿ ಭವನದ ಸಂಚಾಲಕ ಟಿ.ಜಿ.ವಿಠ್ಠಲ್ ತಿಳಿಸಿದ್ದಾರೆ.
ನಗರದ ಗಾಂಧಿಭವನದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವವನ್ನು ಬಲಪಡಿಸಲು ಇತಿಹಾಸವನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ಹಸ್ತಾತಂತರಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸ್ವಾತಂತ್ರ್ಯ ಭಾರತ 70 ವರ್ಷಗಳ ಆಚರಣೆ ಐತಿಹಾಸಿಕ ಮೈಲುಗಲ್ಲು ಆಗಿಸುವ ನಿಟ್ಟಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ.
ಬಳ್ಳಾರಿಯ ಸೆಂಟ್ರಲ್ ಜೈಲು. ಕೇಂದ್ರ ಕಾರಗ್ರಹ ಹಾಗೂ ಅಲ್ಲೀಪರ ಜೈಲುಗಳಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ ಇಡಲಾಗಿತ್ತು. ಅನೇಕ ನಾಯಕರು ಈ ಸ್ಥಳದಲ್ಲಿ ಸ್ವಾತಂತ್ರ್ಯ ಹೋರಾಟದ ಭಾಷಣ ಮಾಡಿದ ನೆನಪಿಗಾಗಿ ಹಾಗೂ ಪ್ರಜಾ ಪ್ರಭುತ್ವದ ನಾಲ್ಕು ಅಂಗಗಳನ್ನು ಎತ್ತಿಹಿಡಿಯುವ ಸಲುವಾಗಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಆ.9 ರಂದು ಹಿರಿಯ ಗಾಂಧಿವಾದಿ ಮಾಳಗಿ ಉದ್ಟಾಟಿಸಲಿದ್ದಾರೆ ಎಂದರು.