ದೇವಸ್ಥಾನ ಉದ್ಘಾಟನೆ ವಿಚಾರ: ಹಾಲಿ- ಮಾಜಿ ಶಾಸಕ ಕಿತ್ತಾಟ

ಭಾನುವಾರ, 8 ಜುಲೈ 2018 (17:34 IST)
ಹಠಕ್ಕೆ ಬಿದ್ದ ರಾಜಕಾರಣಿಗಳಿಂದ ಉದ್ಘಾಟನೆಯಾದ ದೇವಸ್ಥಾನಕ್ಕೆ ಮತ್ತೊಮ್ಮೆ ಉದ್ಘಾಟನೆ ಭಾಗ್ಯ ಸಿಕ್ಕಿದೆ. ದೇವಸ್ಥಾನದಲ್ಲಿ ಉದ್ಘಾಟನೆ ವಿಚಾರದಲ್ಲಿ ಹಾಲಿ ಶಾಸಕ ಹಾಗೂ ಮಾಜಿ ಶಾಸಕ ನಡುವೆ ಕಿತ್ತಾಟ ಆರಂಭವಾಗಿದೆ. 

 
ಹಠಕ್ಕೆ ಬಿದ್ದ ರಾಜಕಾರಣಿಗಳಿಂದ ಉದ್ಘಾಟನೆಯಾದ ದೇವಸ್ಥಾನಕ್ಕೆ ಮತ್ತೊಮ್ಮೆ ಉದ್ಘಾಟನೆ ಭಾಗ್ಯ ಸಿಕ್ಕಿದೆ. ದೇವಸ್ಥಾನದಲ್ಲಿ ಉದ್ಘಾಟನೆ ವಿಚಾರದಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದ ಹಾಲಿ ಶಾಸಕ ಸುರೇಶ್ ಗೌಡ ಹಾಗೂ ಮಾಜಿ ಶಾಸಕ ಚಲುವರಾಯಸ್ವಾಮಿ ನಡುವೆ ಕಿತ್ತಾಟ ಆರಂಭವಾಗಿದೆ. 

ಮೊದಲು ಚಲುವರಾಯಸ್ವಾಮಿ ಉದ್ಘಾಟಿಸಿದ ದೇವಾಲಯವನ್ನ ಮತ್ತೊಮ್ಮೆ  ಶಾಸಕ ಸುರೇಶ್ ಗೌಡ ಉದ್ಘಾಟಿಸುತ್ತಿದ್ದಾರೆ. ಶ್ರೀ ತೋಪಿನ ತಿಮ್ಮಪ್ಪನ ದೇವಾಲಯ ಎರಡೆರಡು ಬಾರಿ ಉದ್ಘಾಟನೆಯಾಗ್ತಿರುವ ದೇವಾಲಯವಾಗಿದ್ದು, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕಿರಂಗೂರು ಗ್ರಾಮದಲ್ಲಿರುವ ಈ ದೇವಾಲಯ, ರಾಜಕೀಯ ನಾಯಕರು ಒಂದೇ ದೇವಾಲಯವನ್ನ ಎರಡೆರಡು ಬಾರಿ ಉದ್ಘಾಟಿಸುತ್ತಿರುವುದಕ್ಕೆ ಗ್ರಾಮದಲ್ಲಿ ಮೂಡಿದ ಅಶಾಂತಿ ಮೂಡಿದೆ.

ಹರಿಸೇವೆ ಮಾಡುವ ನೆಪದಲ್ಲಿ ದೇವಾಲಯವ ಉದ್ಘಾಟನೆ ಮಾಡಲು ಮುಂದಾಗಿರುವ ಶಾಸಕ ಸುರೇಶ್ ಗೌಡ ವಿರುದ್ದ ಚಲುವರಾಯಸ್ವಾಮಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ರಾಜಕೀಯ ನಾಯಕರ ಜಿದ್ದಿಗೆ ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರೆ. ಪೋಲಿಸ್ ಬಿಗಿ ಬಂದೋಬಸ್ತ್ ನಡುವೆ ದೇವಾಲಯ ಉದ್ಘಾಟನೆಗೆ ಸಿದ್ದತೆ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ