ಮುಂಬೈ ಎಫೆಕ್ಟ್ : 3 ಮಕ್ಕಳು ಸೇರಿದಂತೆ 9 ಜನರಲ್ಲಿ ಕೊರೊನಾ

ಗುರುವಾರ, 21 ಮೇ 2020 (16:17 IST)
ಮಹಾರಾಷ್ಟ್ರದ ಮುಂಬೈ ಎಫೆಕ್ಟ್ ರಾಜ್ಯದ ಮೇಲೆ ಜೋರಾಗಿದ್ದು ತಾಗುತ್ತಿದ್ದು ಅಲ್ಲಿಂದ ಬಂದವರಿಂದಾಗಿ ಕೊರೊನಾ ಕೇಸ್ ಹೆಚ್ಚಾಗುತ್ತಿವೆ.

ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ 9 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯಲ್ಲಿ ಇವರೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ 65 ಕ್ಕೇರಿದಂತಾಗಿದೆ. ಈಗಾಗಲೇ 12 ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇಬ್ಬರು ಪುರುಷರಲ್ಲಿ, ಮೂವರು ಮಹಿಳೆಯರಲ್ಲಿ ಹಾಗೂ 1 ಹಾಗೂ 6 ಮತ್ತು ಏಳು ವರ್ಷದ ಮಕ್ಕಳಲ್ಲಿ ವೈರಸ್ ದೃಢಪಟ್ಟಿದೆ.
ಶಿರಸಿಯಲ್ಲಿ ದೃಢಪಟ್ಟ ಎಲ್ಲಾ 9 ಸೋಂಕಿತರು ಇತ್ತಿಚೆಗೆ ಮಹಾರಾಷ್ಟ್ರದಿಂದ ಆಗಮಿಸಿದ್ದು, ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಡಲಾಗಿತ್ತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ