ದಾವೂದ್ ಯಾರ್ಯಾರ ಜೊತೆ ನಂಟು ಬೆಳೆಸಿದ್ದ ಗೊತ್ತಾ..?

geetha

ಮಂಗಳವಾರ, 5 ಮಾರ್ಚ್ 2024 (17:24 IST)
ಬೆಂಗಳೂರು-ದಾವೂದ್ ೧೯೯೦ರ ಹೊತ್ತಿಗೆಲ್ಲಾ ಅಲ್ಕೈದಾ ಜೊತೆ ನಂಟು ಹೊಂದಿದ್ದ. ಸತ್ತಿರುವ ಒಸಾಮಾ ಬಿನ್ ಲ್ಯಾಡೆನ್ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಅವನನ್ನು ಅಫ್ಘಾನಿಸ್ತಾನದಲ್ಲಿ ಆಗಾಗ ಭೇಟಿಯಾಗುತ್ತಿದ್ದ. ಈ ಸಂದರ್ಭದಲ್ಲೇ ಭಾರತವನ್ನು ಘಾಸಿಗೊಳಿಸಲು ನಿರ್ಧರಿಸಿದ್ದ. ಬಾಬ್ರಿ ಮಸೀದಿಯ ಧ್ವಂಸಕ್ಕೆ ಆತ ಮುಂಬೈಗೆ ಬಾಂಬಿಟ್ಟು ರಿವೇಂಜ್ ಹೇಳಲಿಲ್ಲ. ಆತನ ಜೊತೆಗಿದ್ದ ರಕ್ಕಸ ಅಲ್ಖೈದಾದ ಮತಾಂಧರಿಗೆ ಭಾರತವನ್ನು ಸುಡಲೇಬೇಕೆನ್ನುವ ದರ್ದಿತ್ತು. ಅವರೇ ಹೇಳುವ ಪ್ರಕಾರ ಅದು ಜಿಹಾದ್. ಅದಕ್ಕೆ ದಾವೂದ್ ಎಂಬ ಅಸ್ತçವನ್ನು ಎನ್ಕ್ಯಾಶ್ ಮಾಡಿಕೊಂಡಿದ್ದರು.

ದಾವೂದ್ ಬಾಬ್ರಿ ಮಸೀದಿ ದ್ವಂಸಕ್ಕೆ ರಿವೇಂಜ್ ಹೇಳುವ ಮೂಲಕ ದೇಶದ ಅಸಂಖ್ಯಾ ಮುಸ್ಲೀಮರ ರೋಲ್ ಮಾಡೆಲ್ ಆಗಲು ಹವಣಿಸಿದ್ದ. ಆ ನಿಟ್ಟಿನಲ್ಲಿ ಅಲ್ಪಮಟ್ಟಿಗೆ ಯಶಸ್ವಿಯೂ ಆದ. ಸತ್ತವರಲ್ಲಿ ಮುಸ್ಲೀಮರೂ ಇದ್ದರೂ ಎಂಬ ವಾಸ್ತವ ಅವನಿಗೆ ಬೇಕಿರಲಿಲ್ಲ. ಯಾರು ಸತ್ತರೇನು..? ಭಾರತದ ನೆಲದಲ್ಲಿ ನೆತ್ತರು ಹರಿಯಬೇಕಷ್ಟೇ..! ರಿವೇಂಜ್ ಹೇಳಲು ಹೊರಟ ದಾವೂದ್, ಅನಾಮತ್ತಾಗಿ ಮುಂಬೈನಲ್ಲಿ ಬಾಂಬಿಟ್ಟುಬಿಟ್ಟಿದ್ದ.

ಅವತ್ತೇ `ಡಿ' ಕಂಪನಿಯಿAದ ಛೋಟಾ ರಾಜನ್ ಹಾಗೂ ಶರದ್ ಶೆಟ್ಟಿ ಹೊರಬಂದಿದ್ದರು. ಆಮೇಲೆ ಶರದ್ ಶೆಟ್ಟಿ, ಛೋಟಾ ರಾಜನ್ ದುಬೈನಲ್ಲಿ ಕುಂತು ಇಲ್ಲಿಗಲ್ ದಂಧೆಗಳನ್ನು ಪೋಷಿಸತೊಡಗಿದರು. ಭಾರತದ ಗುಪ್ತಚರ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡು, ದಾವೂದ್ ನಡೆಸುತ್ತಿದ್ದ ಅವ್ಯವಹಾರ, ಸ್ಕೆಚ್ಚು, ಡೀಲುಗಳ ಮಾಹಿತಿಯನ್ನು ಒದಗಿಸತೊಡಗಿದ್ದರು. ಇದರ ಪರಿಣಾಮ ಶರದ್ ಶೆಟ್ಟಿಯನ್ನು ದುಬೈನ ಗಾಲ್ಫ್ ಕ್ಲಬ್ನಲ್ಲಿ ಶೂಟ್ ಮಾಡಿ ಕೊಲ್ಲಲಾಯಿತು. ದಾವೂದ್ ತನ್ನನ್ನೂ ಬಿಡಲ್ಲ ಅಂತ ಹೆದರಿದ ಛೋಟಾ ರಾಜನ್ ಅಲ್ಲಿಂದ ಬ್ಯಾಂಕಾಕ್ಗೆ ಹೋದ. ಗೆಳೆಯ ರೋಹಿತ್ವರ್ಮ ಅವನಿಗೆ ಆಶ್ರಯ ಕೊಟ್ಟ. ಆದರೆ ದಾವೂದ್ ಇದೇ ಶರದ್ ಶೆಟ್ಟಿಯ ಆಪ್ತ ವಿನೋದ್ ಶೆಟ್ಟಿಯನ್ನು ಬೆದರಿಸಿ ಛೋಟಾ ರಾಜನ್ ಅಡಗುದಾಣವನ್ನ ಪತ್ತೆ ಹಚ್ಚಿದ. ಅವನನ್ನು ಕೊಲ್ಲಲು ಛೋಟಾ ಶಕೀಲ್ ಮೂಲಕ ರಶೀದ್ ಮಲಬಾರಿಗೆ ಡೀಲ್ ಒಪ್ಪಿಸಿದ್ದ. ಇಸವಿ ೨೦೦೦ದಂದು ಬ್ಯಾಂಕಾಕ್ನಲ್ಲಿ ನಡೆದ ಶೂಟೌಟ್ನಲ್ಲಿ ರೋಹಿತ್ವರ್ಮ ಸತ್ತರೇ, ಗುಂಡೇಟು ತಿಂದ ರಾಜನ್ ತಪ್ಪಿಸಿಕೊಂಡಿದ್ದ.
 
 
 
ದಾವೂದ್ಗೆ ಸ್ಕೇಚ್ ರೂಪಿಸಿದ್ದ ಛೋಟಾ ರಾಜನ್
 
ಹಾಗೆಯೇ ದಾವೂದ್ ಮೇಲೂ ಅನೇಕ ಅಟ್ಯಾಕ್ಗಳು ನಡೆದಿವೆ. ಆಗೆಲ್ಲಾ ಕೂದಲೆಳೆಯಲ್ಲಿ ಬಚಾವಾಗಿದ್ದಾನೆ. ಈ ಪಾಪಕೂಪದಲ್ಲಿ ತನ್ನ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾನೆ. ಅಪಾರ ಸ್ನೇಹಿತರು, ಶಿಷ್ಯರನ್ನು ಬೆಳೆಸಿದ್ದಾನೆ. ಕರಾಚಿಯಲ್ಲಿ ಅದೊಮ್ಮೆ ಚೋಟಾ ರಾಜನ್ ದಾವೂದ್ಗೆ ಸ್ಕೆಚ್ ಇಟ್ಟಿದ್ದ. ದಾವೂದ್ ಕರಾಚಿಯ ತನ್ನ ಅಡಗುದಾಣದ ಸಮೀಪವೇ ಇರುವ ದರ್ಗಾಕ್ಕೆ ಭೇಟಿ ಕೊಡುತ್ತಾನೆ ಎನ್ನುವುದು ಅಲ್ಲಿಗೆ ಹೋಗಿದ್ದ ಶಾರ್ಪ್ ಶೂಟರ್ಗಳ ತಂಡಕ್ಕೆ ಗೊತ್ತಿದ್ದ ವಿಚಾರ. ಹಂತಕರು ಬೇರೇನನ್ನು ಯೋಚಿಸಲು ಹೋಗಲಿಲ್ಲ. ಸ್ಪಾಟ್ ಫಿಕ್ಸ್ ಆಗಿತ್ತು. ಆಪರೇಷನ್ ಕರಾಚಿ, ದರ್ಗಾದಲ್ಲೇ ಸಮಾಪ್ತಿ ಆಗುವ ಸಿದ್ದತೆ ನಡೆದಿತ್ತು. ಹಂತಕರು ಸರ್ವಸನ್ನದ್ಧರಾಗಿ ದಾವೂದ್ನನ್ನು ಬಲಿಹಾಕಲು ಕಾದುಕುಂತರು. ಆದರೆ ಅಲ್ಲಿಗೆ ದಾವೂದ್ ಬರಲಿಲ್ಲ. ಅವತ್ತು ಮಾತ್ರವಲ್ಲ, ಮತ್ಯಾವತ್ತು ದಾವೂದ್ ಆ ದರ್ಗಾಕ್ಕೆ ಕಾಲಿಡಲಿಲ್ಲ.
 
 
ಬಹುಶಃ ಚೋಟಾ ರಾಜನ್ ಬದುಕಿರಬಾರದು ಎಂದು ದಾವೂದ್ ನಿರ್ಧರಿಸಿದ್ದು ಆಗಲೇ...!. ಆ ನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನು ಮಾಡಿದ್ದ. ಈಗಲೂ ಮಾಡುತ್ತಿದ್ದಾನೆ. ಇವತ್ತು ಛೋಟಾ ರಾಜನ್ ಅರೆಸ್ಟ್ ಆಗಿ ಭಾರತದ ಜೈಲಿನಲ್ಲಿದ್ದಾನೆ. ನಕಲಿ ಪಾಸ್ಪೋರ್ಟ್ಗೆ ಸಂಬAಧಿಸಿದAತೆ ಏಳು ವರ್ಷದ ಕಾರಾಗೃಹ ಶಿಕ್ಷೆಯಾಗಿದೆ. ಅವತ್ತು ಒಬ್ಬ ಲ್ಯಾಡೆನ್ನನ್ನು ಪಾಕಿಸ್ತಾನಕ್ಕೆ ನುಗ್ಗಿ ಹತ್ಯೆಗೈದಿದ್ದ ಅಮೇರಿಕಾ, ದಾವೂದ್ ಬಗ್ಗೆ ಅಷ್ಟೇನೂ ಆಸ್ಥೆ ತೋರಿಸಲಿಲ್ಲ. ಭಾರತಕ್ಕೆ ಪಾಕಿಸ್ತಾನದ ಉಗ್ರಕೋಟೆಯನ್ನು ಭೇದಿಸಿ, ದಾವೂದ್ನನ್ನು ಹಿಡಿಯೋ ಬಾಹ್ಯ ಶಕ್ತಿಯಿದ್ದರೂ, ನೈತಿಕವಾಗಿ ದುರ್ಬಲವಾಗಿತ್ತು. 
 
 
ದಾವೂದ್, ಕೆಲ ವರ್ಷಗಳ ಹಿಂದೆ ತನ್ನ ಮಗಳನ್ನು ಪಾಕಿಸ್ತಾನದ ಕ್ರಿಕೆಟರ್ ಜಾವೇದ್ ಮಿಯಾಂದಾದ್ ಮಗನಿಗೆ ನಿಖಾ ಮಾಡಿಕೊಟ್ಟಿದ್ದ. ಆತ ಮತ್ತೆಲ್ಲೂ ಕಾಣಿಸಿಕೊಂಡೂ ಇಲ್ಲ. ಆಮೇಲೆ ಅವನ ಶರಣಾಗತಿಯ ಸುದ್ದಿ ಹರಿದಾಡಿತ್ತು. ಈಗ ಅವನು ಪಾಕಿಸ್ತಾನದಲ್ಲೇ ಇದ್ದಾನೆ ಎನ್ನಲಾಗುತ್ತಿದೆ. ಡಾನ್ ಅದೆಲ್ಲೋ ಕುಂತು ನಿಗೂಢವಾಗಿ ಚಿದ್ವಿಲಾಸಗೈಯ್ಯುತ್ತಿರಬಹುದಾ..? ಇದು ಮುಗಿಯದ ವಿಚಾರ; ಲೀವ್ ಇಟ್..!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ