ಕೋವಿಡ್‌ಶೀಲ್ಡ್ ಪಡೆದವರು ಫ್ರಿಡ್ಜ್ ನೀರು, ಐಸ್ ಕ್ರೀ ಸೇವಿಸಬೇಡಿ ಎಂದು ತಪ್ಪು ಮಾಹಿತಿ ಕೊಟ್ಟ ಕಾಲೇಜುಗಳಿಗೆ ನೋಟಿಸ್
ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ತಪ್ಪು ಮಾಹಿತಿ ನೀಡಿದ ನಗರದ ವಿವಿಧ ಕಾಲೇಜುಗಳ ವಿರುದ್ಧ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ. ಜಿಲ್ಲಾಧಿಕಾರಿ ನೇತೃತ್ವದ ಡಿಜಾಸ್ಟರ್ ಮ್ಯಾನೇಜ್ಮೆಂಟ್ ಕಮಿಟಿ ಮುಂದಾಗಿದೆ. ಸೂಚನಾ ಪತ್ರಗಳ ಬಗ್ಗೆ ಸೂಕ್ತ ಸ್ಪಷ್ಟನೆ ನೀಡುವಂತೆ ನೋಟಿಸ್ ನೀಡಲಾಗಿದೆ.
ಕಾಲೇಜು ಆಡಳಿತ ಮಂಡಳಿಗಳ ಸೂಚನಾ ಪತ್ರ ವೈರಲ್ ಆಗಿದ್ದರಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದ್ದು ಈ ಸಂಬಂಧ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆ ಯಾವುದೇ ಸುತ್ತೋಲೆಯನ್ನು ಹೊರಡಿಸಿಲ್ಲ ಎಂದು ತಿಳಿಸಿದೆ.