ನಕಲಿ ಫೇಸ್ ಬುಕ್ ಪುಟಗಳನ್ನು ಫಾಲೋ ಮಾಡಬೇಡಿ- ಸುಮಲತಾ ಮನವಿ

ಸೋಮವಾರ, 16 ಸೆಪ್ಟಂಬರ್ 2019 (10:20 IST)
ಬೆಂಗಳೂರು : ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ತಮ್ಮ ಹೆಸರಿನಲ್ಲಿರುವ ನಕಲಿ ಫೇಸ್ ಬುಕ್ ಪುಟಗಳನ್ನು ಫಾಲೋ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.




 ಸುಮಲತಾ ಅವರ ಹೆಸರಿನಲ್ಲಿ ನಕಲಿ ಖಾತೆಗಳ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ಇದೀಗ ಅವರು ತಮ್ಮ ಅಧಿಕೃತ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಖಾತೆಯಲ್ಲಿ  ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಜೊತೆಗೆ ನಕಲಿ ಪುಟದ ಸ್ಕ್ರೀನ್‍ಶಾರ್ಟ್ ತೆಗೆದು ಅದನ್ನು ಕೂಡ ಶೇರ್ ಮಾಡಿದ್ದಾರೆ.

 

‘ನಕಲಿ ಪುಟಗಳ ಹಾವಳಿ ಇನ್ನೂ ಮುಂದುವರಿದಿದೆ. ಇಂತಹ ಫೇಸ್‍ಬುಕ್ ಪುಟಗಳನ್ನು ಫಾಲೋ ಮಾಡಬೇಡಿ. ಇದು ನನ್ನ ಅಧಿಕೃತ ಪುಟವಲ್ಲ, ಈ ಪೇಜ್ ನ್ನು ಫಾಲೋ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ