ರಾಜ್ಯದಲ್ಲಿ ಕೋವಿಡ್ ಆತಂಕ ಬೇಡ ಡಿಕೆಶಿ
ಓಮಿಕ್ರಾನ್ ಸೋಂಕಿನ ಭೀತಿ ಹಿನ್ನೆಲೆ, ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ಮಾಡುವ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಮಾಧ್ಯಮಗಳಲ್ಲಿ ಮಾತ್ರ ಓಮಿಕ್ರಾನ್ ಸುದ್ದಿ ಬರುತ್ತಿದ್ದು, ರಾಜ್ಯದಲ್ಲಿ ಆ ವಾತಾವರಣ ಇಲ್ಲ ಎಂದು ಹೇಳಿದರು.ಏಕೆಂದರೆ ಕಳೆದ ಎರಡು ವರ್ಷದಿಂದ ಹೋಟೆಲ್ ಸೇರಿದಂತೆ ಎಲ್ಲಾ ಕ್ಷೇತ್ರಗಳು ಸಂಕಷ್ಟದಲ್ಲಿವೆ. ಇನ್ನೂ ಏರ್ಪೋರ್ಟ್ ಗಳಲ್ಲಿ ಕೊರೋನಾ ಸರ್ಟಿಫಿಕೇಟ್ ತೋರಿಸಿ ಎಂಟ್ರಿ ಆಗಬೇಕು ಅಂದ್ರೆ ಹೇಗೆ, ಇಡೀ ದೇಶಕ್ಕೆ ಇಲ್ಲದಿರುವ ಆದೇಶ, ಕರ್ನಾಟಕದಲ್ಲಿ ಮಾತ್ರ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಮತ್ತೆ ರಾಜ್ಯದಲ್ಲಿ ಕಠಿಣ ನಿಯಮ ಜಾರಿ ಆದರೆ ಜನರು ಮತ್ತಷ್ಟು ತೊಂದರೆಗೆ ಸಿಲುಕಲಿದ್ದಾರೆ ಹೀಗಾಗಿ ಗೊಂದಲ ಮೂಡಿಸುವ ಪ್ರಯತ್ನ ಬೇಡ ಎಂದು ಸರ್ಕಾರದ ವಿರುದ್ಧ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ.