ಮಾಧ್ಯಮಗಳೆದುರು ಮಕ್ಕಳಂತೆ ಕಿತ್ತಾಡಿ ನಗೆಪಾಟಲಿಗೀಡಾದ ಝೆಲೆನ್ ಸ್ಕಿ, ಡೊನಾಲ್ಡ್ ಟ್ರಂಪ್ ವಿಡಿಯೋ
ಅಮೆರಿಕಾಕ್ಕೆ ಭೇಟಿ ನೀಡಿದ ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಜೊತೆ ಟ್ರಂಪ್ ಶ್ವೇತಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿದ್ದಾರೆ. ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮತ್ತು ಅದಕ್ಕೆ ಅಮೆರಿಕಾ ನೀಡಿದ ಸಹಾಯದ ಕುರಿತು ಎರಡೂ ರಾಷ್ಟ್ರಗಳ ನಾಯಕರು ಚರ್ಚೆ ನಡೆಸಿದ್ದಾರೆ.
ನಾವು ರಷ್ಯಾದೊಂದಿಗೆ ಯಾವುದೇ ಕದನ ವಿರಾಮ ಒಪ್ಪಂದ ಉಲ್ಲಂಘನೆ ನಾವು ಒಪ್ಪಿಕೊಳ್ಳಲ್ಲ. ಈ ಹಿಂದೆ 25 ಬಾರಿ ಕದನ ವಿರಾಮ ಒಪ್ಪಂದ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ರಷ್ಯಾದೊಂದಿಗೆ ಅಮೆರಿಕಾ ಯಾವುದೇ ಒಪ್ಪಂದ ಮಾಡಿಕೊಳ್ಳಬಾರದು ಎಂದು ಝೆಲೆನ್ ಸ್ಕಿ ಹೇಳಿದರು.
ಇದಕ್ಕೆ ಟ್ರಂಪ್ ನೀವು ಲಕ್ಷಾಂತರ ಜನರ ಜೀವಗಳ ಜೊತೆ ಆಟವಾಡುತ್ತಿದ್ದೀರಿ. ಇದು ನಿಮಗೆ ಗೊತ್ತಾಗುತ್ತಿಲ್ಲ. ಕೊನೆಯದಾಗಿ ನೀವು ರಷ್ಯಾದೊಂದಿಗೆ ರಾಜಿ ಮಾಡಿಕೊಳ್ಳಲೇಬೇಕಾಗುತ್ತದೆ ಎಂದಿದ್ದಾರೆ. ಈ ವಿಚಾರವಾಗಿ ಇಬ್ಬರೂ ನಾಯಕರು ಮಾಧ್ಯಮಗಳ ಮುಂದೆ ಕಿತ್ತಾಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಎರಡು ದೊಡ್ಡ ರಾಷ್ಟ್ರಗಳ ನಾಯಕರಾಗಿದ್ದುಕೊಂಡು ಬಹಿರಂಗವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದೂ ಇವರಿಗೆ ಗೊತ್ತಿಲ್ಲವೇ ಎಂದು ಹಲವರು ಕಿಡಿ ಕಾರಿದ್ದಾರೆ. ಇನ್ನೂ ಮುಂದುವರಿದು ಕೆಲವರು ಈ ವಿಡಿಯೋವನ್ನೇ ಎಐ ತಂತ್ರಜ್ಞಾನದ ಮೂಲಕ ಇಬ್ಬರೂ ಕೈ ಕೈ ಮಿಲಾಯಿಸುವಂತೆ ಎಡಿಟ್ ಮಾಡಿ ತಮಾಷೆ ಮಾಡಿದ್ದಾರೆ.