ಜಾನ್ಸನ್ ಪೌಡರ್ ಸಿಗುವುದು ಡೌಟ್? ಯಾಕೆ ಅಂತೀರಾ? ಇಲ್ಲಿದೆ ಮಾಹಿತಿ

ಶನಿವಾರ, 13 ಆಗಸ್ಟ್ 2022 (16:10 IST)
ಫಾರ್ಮ ಕಂಪನಿ ಜಾನ್ಸನ್ ಆಯಂಡ್ ಜಾನ್ಸನ್ ಟಾಲ್ಕಮ್ ಆಧಾರಿತ ಜಾನ್ಸನ್ ಬೇಬಿ ಪೌಡರ್ ಮಾರಾಟವನ್ನು 2023ಕ್ಕೆ ವಿಶ್ವಾದ್ಯಂತ ನಿಲ್ಲಿಸಲಾಗಿದೆ ಎಂದು ಘೋಷಿಸಲಾಗಿದೆ.
 
ಅಮೆರಿಕ ಮತ್ತು ಕೆನಡಾದಲ್ಲಿ ಮಾರಾಟವನ್ನು ನಿಲ್ಲಿಸಿದ್ದ ಜಾನ್ಸನ್ ಆಯಂಡ್ ಜಾನ್ಸನ್ ಟಾಲ್ಕಮ್ ಪೌಡರ್ ಇದೀಗ ವಿಶ್ವಾದ್ಯಂತ ಮಾರಾಟವನ್ನು ನಿಲ್ಲಿಸುತ್ತಿದೆ. ಜೊತೆಗೆ ಕ್ಯಾನ್ಸರ್ ಆತಂಕದ ವರದಿ ಬೆನ್ನಲ್ಲೇ ಈ ಉತ್ಪನ್ನದ ಮಾರಾಟ ಭಾರೀ ಕುಸಿತ ಕಂಡುಬಂದಿದೆ.
 
ವಿಶ್ವದಾದ್ಯಂತ ಮೌಲ್ಯಮಾಪನವಾಗಿ, ನಾವು ಎಲ್ಲಾ ಕಾರ್ನ್‌ಸ್ಟಾರ್ಚ್ ಆಧಾರಿತ ಬೇಬಿ ಪೌಡರ್‌ಗಳ ಮಾರಾಟವನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದು ಜಾನ್ಸನ್ ಮತ್ತು ಜಾನ್ಸನ್ ಪ್ರಕಟಿಸಿದೆ.ಪೌಡರ್ ಬಗ್ಗೆ ಕಂಪನಿಯ ಬಗ್ಗೆ ಸಂಶೋಧನೆ ನಡೆಸಿ, ಟಾಲ್ಕಮ್ ಬೇಬಿ ಪೌಡರ್ ಸುರಕ್ಷಿತ ಮತ್ತು ಇದು ಕ್ಯಾನ್ಸರ್‌ಗೆ ಕಾರಣವಾಗುವುದಿಲ್ಲ ಎಂದು ತಿಳಿಸಲಾಗಿದೆ. ಆದರೂ ಪೌಡರ್ ಖರೀದಿಗೆ ಜನರು ಹಿಂದೇಟು ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ