ಆಂಧ್ರಪ್ರದೇಶ: ವಿಶಾಖಪಟ್ಟಣದ ಆರ್‌ಕೆ ಬೀಚ್‌ನಲ್ಲಿ ಸೋಮವಾರ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಪ್ರಕರಣದ ಸಸ್ಪೆನ್ಸ್ ಅನ್ನು ಪೊಲೀಸರು ಭೇದಿಸಿದ್ದಾರೆ. ಪ್ರಿಯಕರ ರವಿಯೊಂದಿಗೆ ನೆಲ್ಲೂರಿಗೆ ಹೋಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸಾಯಿಪ್ರಿಯಾ ತನ್ನ ಪ್ರಿಯಕರ ರವಿಯೊಂದಿಗೆ ನೆಲ್ಲೂರಿನಲ್ಲಿ ಇರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಪತಿ ಶ್ರೀನಿವಾಸ್ ತಮ್ಮ ಮೊಬೈಲ್ ಫೋನ್ ನಲ್ಲಿ ಮೆಸೇಜ್ಗಳನ್ನು ಪರಿಶೀಲಿಸುತ್ತಿದ್ದಾಗ ಪಕ್ಕದಲ್ಲಿಯೇ ಇದ್ದ ಸಾಯಿಪ್ರಿಯಾ ನಾಪತ್ತೆಯಾಗಿದ್ದರು. ಪತ್ನಿ ಕಾಣದಿದ್ದಾಗ ಆತಂಕಗೊಂಡ ಪತಿ ಸುತ್ತಮುತ್ತ ಜಾಲಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗದೆ, ಕೊನೆಗೆ ಪೊಲೀಸರಿಗೆ ದೂರು ನೀಡಿದ್ದರು.
ಮದುವೆಗೂ ಮುನ್ನ ರವಿ ಎಂಬಾತನ ಜತೆ ಸಾಯಿ ಪ್ರಿಯಾ ಅಕ್ರಮ ಸಂಬಂಧ ಹೊಂದಿದ್ದಳು. ಈ ಮಧ್ಯೆ, ಶ್ರೀನಿವಾಸ್ ಎಂಬಾತನ ಜೊತೆ ಎರಡನೇ ಮದುವೆ ಆಗಿದ್ದರು. ಮದುವೆ ವಾರ್ಷಿಕೋತ್ಸವದಂದು ಎಲ್ಲಾದರೂ ಸುತ್ತಾಡಿಕೊಂಡು ಬರೋಣ ಎಂದು ಪ್ರೀತಿಯಿಂದ ಕೇಳಿದ್ದ ಮುದ್ದು ಮಡದಿಯ ಮಾತನ್ನು ಅಲ್ಲಗಳೆಯಲಾರದೆ ಪತಿ ಶ್ರೀನಿವಾಸ್ ಕೂಡಲೆ ಸಮ್ಮತಿ ಸೂಚಿಸಿದ್ದರು. ಆದರೆ ಮಡದಿಯ ಯೋಜನೆ ಬೇರೆಯದ್ದೇ ಆಗಿದೆ ಎಂಬುದು ಅಮಾಯಕ ಪತಿ ಶ್ರೀನಿವಾಸ್‌ಗೆ ಆ ಕ್ಷಣ ತಿಳಿದುಬಂದಿಲ್ಲ.