ಬೆಂಗಳೂರು: ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಲಕ್ಷಾಂತರ ಜನರಿಗೆ ಜೀವನ ಕೊಟ್ಟ ವೈದ್ಯ ಡಾ. ಮುಂಜುನಾಥ್ ಈಗ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಮುಂಬರುವ ಲೋಕಸಭೆ ಚುನಾವಣೆಗೆ ಜೆಡಿಎಸ್ ತನ್ನ ಪ್ರಾಬಲ್ಯವಿರುವ ಒಟ್ಟು ಐದು ಕ್ಷೇತ್ರಗಳಲ್ಲಿ ಪ್ರಬಲ ಸ್ಪರ್ಧಿಗಳನ್ನೇ ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಅದರಂತೆ ಮಂಡ್ಯ ಅಥವಾ ಗ್ರಾಮಾಂತರ ಕ್ಷೇತ್ರದಿಂದ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಮಂಜುನಾಥ್ ಅವರನ್ನು ಕಣಕ್ಕಿಳಿಸಲು ಯೋಜನೆ ರೂಪಿಸಿದೆ. ಆದರೆ ಮೊನ್ನೆಯಷ್ಟೇ ತಮ್ಮ ಸೇವೆಯಿಂದ ನಿವೃತ್ತರಾದ ಮಂಜುನಾಥ್ ರಾಜಕೀಯಕ್ಕೆ ಬರಲು ಸಮ್ಮಿತಿ ನೀಡುತ್ತಾರಾ ಕಾದು ನೋಡಬೇಕಿದೆ.
ದೇವೇಗೌಡರ ಅಳಿಯ ಡಾ. ಮಂಜುನಾಥ್
ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ವರ್ಷಗಳ ದಕ್ಷ ಆಡಳಿತ ನಡೆಸಿ, ಆಸ್ಪತ್ರೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿದ್ದಲ್ಲದೇ ಎಷ್ಟೋ ರೋಗಿಗಳ ಪಾಲಿಗೆ ದೇವರಾಗಿದ್ದವರು ಮಂಜುನಾಥ್. ಅವರು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಅಳಿಯ. ಆದರೆ ಇದುವರೆಗೆ ಮಂಜುನಾಥ್ ರಾಜಕೀಯದಲ್ಲಿ ತೊಡಗಿಸಿಕೊಂಡವರಲ್ಲ. ಆದರೆ ವೈದ್ಯರಾಗಿ ಜನಸೇವೆ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿರುವ ಮಂಜುನಾಥ್ ರನ್ನು ಕಣಕ್ಕಿಳಿಸಿದರೆ ಗೆಲ್ಲಬಹುದು ಎಂಬುದು ಜೆಡಿಎಸ್ ಲೆಕ್ಕಾಚಾರ. ಹೀಗಾಗಿ ಅವರಿಗೆ ಮಂಡ್ಯ ಅಥವಾ ಬೆಂಗಳೂರು ಗ್ರಾಮಾಂತರ ಟಿಕೆಟ್ ಕೊಡಿಸುವ ಇರಾದೆ ಪಕ್ಷಕ್ಕಿದೆ.
ಆದರೆ ಇಷ್ಟು ದಿನ ರಾಜಕೀಯದಿಂದ ದೂರವೇ ಇದ್ದ ಜಯದೇವ್ ಈಗ ರಾಜಕೀಯಕ್ಕೆ ಬರಲು ಒಪ್ಪಿಗೆ ನೀಡುತ್ತಾರೋ ಗೊತ್ತಿಲ್ಲ. ಆದರೆ ಜೆಡಿಎಸ್ ಈ ನಿಟ್ಟಿನಲ್ಲಿ ಪ್ರಯತ್ನವಂತೂ ನಡೆಸುತ್ತಿದೆ.