ಬೆಂಗಳೂರು: ಮೂಢನಂಬಿಕೆಗೆ ಒಳಗಾಗಿ ನರಬಲಿ ಕೊಡುವ ಪದ್ಧತಿ ಈಗಲೂ ಇದೆ. ನಮ್ಮ ದೇಶದ ರಾಜಕಾರಣಿಗಳು ಈಗಲೂ ನರಬಲಿ, ಹೆಣ್ಣು ಮಕ್ಕಳ ಬಲಿ ಕೊಡುತ್ತಾರೆ ಎಂದು ನಿರ್ದೇಶಕ, ಸಾಹಿತಿ ಅಗ್ನಿ ಶ್ರೀಧರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಗ್ನಿ ಶ್ರೀಧರ್ ಈ ರೀತಿ ಬಹಿರಂಗ ಆರೋಪ ಮಾಡಿದ್ದಾರೆ. ನಮ್ಮಲ್ಲಿ ಈಗಲೂ ನರಬಲಿ ಜಾರಿಯಲ್ಲಿದೆ. ದಂಡುಪಾಳ್ಯ ಸಿನಿಮಾದಲ್ಲಿ ದಂಡು ಪಾಳ್ಯ ಗ್ಯಾಂಗ್ ನ್ನು ವೈಭವೀಕರಿಸಿ ಅವರು ಕೊಲೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಸಿನಿಮಾದಲ್ಲಿ ತೋರಿಸಿದ ಅಂಶಗಳು ನಿಜವಲ್ಲ ಎಂದಿದ್ದಾರೆ.
ಕ್ರೀಂ ಸಿನಿಮಾ ಟ್ರೈಲರ್ ಬಿಡುಗಡೆ ವೇಳೆ ಸ್ಪೋಟಕ ಹೇಳಿಕೆ
ಅಗ್ನಿ ಶ್ರೀಧರ್ ಕ್ರೀಂ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಕ್ರೀಂ ಸಿನಿಮಾದಲ್ಲಿ ನಟಿ ಸಂಯುಕ್ತಾ ಹೆಗಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲೂ ನರಬಲಿಗೆ ಸಂಬಂಧಿಸಿದ ಕತೆಯಿದೆ ಎನ್ನಲಾಗಿದೆ.
ನರಬಲಿ ಬಗ್ಗೆ ಅಗ್ನಿ ಶ್ರೀಧರ್ ಹೇಳಿದ್ದೇನು?
ನರಬಲಿ, ಹೆಣ್ಣು ಮಕ್ಕಳ ಬಲಿ ಈಗಲೂ ಕಾಮಾಕ್ಯದಿಂದ, ಕೇರಳದವರೆಗೂ ಇದೆ. ಬಡ ಹೆಣ್ಣು ಮಕ್ಕಳನ್ನು ಭಿಕ್ಷುಕರನ್ನು ಇದಕ್ಕಾಗಿ ಬಳಸಲಾಗುತ್ತದೆ. ಕರ್ನಾಟಕದ ರಾಜಕಾರಣಿಗಳೂ ನಬರಲಿ ಕೊಡುತ್ತಾರೆ. ನೇರವಾಗಿ ಭಾಗಿಯಾಗದೇ ಇದ್ದರೂ ಬೇರೆಯವರ ಮೂಲಕ ಮಾಡಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ.