ಟಿಪ್ಪು ಜಯಂತಿಗೆ ವಿರೋಧವಿದೆ ಎಂದ ಡಾ.ಎನ್.ಚಿದಾನಂದಮೂರ್ತಿ

ಮಂಗಳವಾರ, 30 ಅಕ್ಟೋಬರ್ 2018 (19:42 IST)
ಟಿಪ್ಪುಸುಲ್ತಾನ್ ಕ್ರೂರಿ, ಮತಾಂಧ, ಸ್ವಾರ್ಥಿ, ಕರ್ನಾಟಕ ಚರಿತ್ರೆಗೆ ಕಳಂಕ ತಂದಿರುವವನು ಎಂಬುದು ಮೂಲ ದಾಖಲೆಗಳಿಂದ ಸ್ಪಷ್ಟವಾಗಿದೆ. ಹೀಗಾಗಿ ಸರಕಾರ ನ.10ರಂದು ಟಿಪ್ಪು ಜಯಂತಿ ಆಚರಣೆ ಮಾಡಬಾರದು ಎಂದು ಸಂಶೋಧಕ ಡಾ.ಎನ್.ಚಿದಾನಂದಮೂರ್ತಿ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೈಸೂರು ಅರಸರ ಇತಿಹಾಸಲ್ಲಿಯೇ ಟಿಪ್ಪು ಸುಲ್ತಾನ್ ಒಂದು ಕಪ್ಪು ಚುಕ್ಕೆ ಇದ್ದಂತೆ. ಆತ ಹಿಂದೂ ವಿರೋಧಿಯಾಗಿದ್ದನು. ಅನೇಕ ಹಿಂದೂ ದೇವಾಲಯ, ಅರಮನೆ, ಗ್ರಂಥಗಳನ್ನು, ಓಲೆಗರಿ, ಕಡತಗಳನ್ನು ನಾಶಮಾಡಿದ್ದಾನೆ ಎಂದು ದೂರಿದರು.

ಯಾವುದೇ ಕಾರಣಕ್ಕೂ ಸರಕಾರ ಟಿಪ್ಪು ಜಯಂತಿ ಆಚರಿಸಬಾರದು ಎಂದು ಒತ್ತಾಯಿಸಿದ್ದಾರೆ. ಟಿಪ್ಪು ಜಯಂತಿ ಬದಲಾಗಿ ಬಸವಣ್ಣ, ವಾಲ್ಮೀಕಿ, ಶಿಶುನಾಳ ಶರೀಫ್ ರಂತಹ ಮಹನೀಯರ ಜಯಂತಿಗಳನ್ನು ಆಚರಿಸಿದರೆ ತಮ್ಮ ಬೆಂಬಲ ಇದೆ ಎಂದು ಚಿ.ಮೂ ಹೇಳಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ