ಡ್ರ್ಯಾಗನ್ಸ್ ಬ್ರೀತ್ ಲಿಕ್ವಿಡ್ ನೆಟ್ರೋ ಐಸ್ ಕ್ರೀಮ್ ನಿಷೇಧಕ್ಕೆ ಆಗ್ರಹ
ಮಂಗಳವಾರ, 7 ಆಗಸ್ಟ್ 2018 (17:10 IST)
ಆರೋಗ್ಯದ ಮೇಲೆ ದುಷ್ಪರಿಣಾ ಬೀರುವ ಡ್ರ್ಯಾಗನ್ಸ್ ಬ್ರೀತ್ ಲಿಕ್ವಿಡ್ ನೆಟ್ರೋ ಐಸ್ ಕ್ರೀಮ್ ಮಾರಾಟವನ್ನ ನಿಷೇಧಿಸಿಬೇಕೆಂದು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕಾರ್ಯಕರ್ತರು ಐಸ್ ಕ್ರೀಮ್ ಅಂಗಡಿಯ ಮುಂಭಾಗ ಪ್ರತಿಭಟನೆ ನಡೆಸಿದರು.
ನಗರದ ಕಾಳಿದಾಸ ರಸ್ತೆಯಲ್ಲಿ ಮೈನಸ್ 21 ಡಿಗ್ರಿ ಎಂಬ ಹೆಸರಿನ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಡ್ರ್ಯಾಗನ್ಸ್ ಬ್ರೀತ್ ಲಿಕ್ವಿಡ್ ನೆಟ್ರೋ ಐಸ್ ಕ್ರೀಮ್ ಸಿಗುತ್ತಿದ್ದು, ಐಸ್ ಕ್ರೀಮ್ ತಿಂದ ನಂತರ ಬಾಯಿಯಿಂದ ಹೊಗೆ ಬರುತ್ತದೆ. ಚಿಕ್ಕ ಮಕ್ಕಳು ಈ ಐಸ್ ಕ್ರೀಮ್ ತಿನ್ನುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಡ್ರ್ಯಾಗನ್ಸ್ ಬ್ರೀತ್ ಲಿಕ್ವಿಡ್ ನೆಟ್ರೋ ಐಸ್ ಕ್ರೀಮ್ ಮಾರಾಟವನ್ನು ನಿಷೇಧಿಸಬೇಕೆಂದು ಐಸ್ ಕ್ರೀಮ ಪಾರ್ಲರ್ ಮುಂಭಾಗ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಕಾರರು, ಡ್ರ್ಯಾಗನ್ಸ್ ಬ್ರೀತ್ ಲಿಕ್ವಿಡ್ ನೆಟ್ರೋ ಐಸ್ ಕ್ರೀಮ್ ನಲ್ಲಿ ಸಾರಜನಕವಿದ್ದು, ಅದನ್ನು ತಿಂದವರ ಆರೋಗ್ಯಕ್ಕೆ ಹಾನಿಯಾಗಲಿದೆ. ಡ್ರ್ಯಾಗನ್ಸ್ ಐಸ್ ಕ್ರೀಮ್ ಆಹಾರ ಪದಾರ್ಥವನ್ನು ಮಾರಾಟ ಮಾಡುತ್ತಿರುವುದನ್ನು ತಡೆ ಒಡ್ಡದ ಆರೋಗ್ಯಾಧಿಕಾರಿಗಳ ನಡೆ ಸಂಶಯಕ್ಕೆ ಕಾರಣವಾಗಿದೆ ಎಂದು ದೂರಿದರು.