ಸಾಮಾಜಿಕ ಜಾಲತಾಣದಲ್ಲಿ ಡ್ರೈವರ್ ಲೆಸ್ ಕಾರು ವೈರಲ್ ಆಗ್ತಿದೆ.ರಾತ್ರೋ ರಾತ್ರಿ ಕಾರು ಓಡಾಡುವುದು ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ.ಸ್ಟೇರಿಂಗ್ ಇಲ್ಲದ,ಡ್ರೈವರ್ ಇಲ್ಲದ ಕಾರು ಕಂಡು ಗಾಬರಿಯಾಗಿ ವಿಚಾರಿಸಿದ ಬಳಿಕ ಅಸಲಿ ವಿಚಾರ ಬಯಲಾಗಿದೆ.ಟೆಸ್ಟಿಂಗ್ ಗಾಗಿ ಕಾರು ಓಡಾಡಿಸುತ್ತಿದ್ದ ಮೈನಸ್ ಜೀರೋ ಸ್ಟಾರ್ಟ್ ಅಪ್ ಕಂಪನಿಯಾಗಿದೆ.
ಆರ್ಟಿಫೀಸಿಯಲ್ ಇಂಟೆಲಿಜೆನ್ಸ್ ಬಳಸಿ ಕಾರು ತಯಾರಿ ಮಾಡಿದ್ದು,ಸ್ಟೇರಿಂಗ್ ಲೆಸ್ ಕಾರು ತಯಾರಿಸಿ ಆಕ್ಸಿಡೆಂಟ್ ಫ್ರೀ ರೈಡ್ ಟೆಸ್ಟಿಂಗ್ ಮಾಡಲಾಗಿದೆ.ZPod ಹೆಸರಿನಲ್ಲಿ ಕಾರು ತಯಾರಿಸಿ ಟೆಸ್ಟಿಂಗ್ ಮಾಡಲಾಗಿದೆ.ಸದ್ಯ ವಿಷಯ ತಿಳಿದ ಬಳಿಕ ರಾಜಧಾನಿ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ.