ಡ್ರಗ್ ಕೇಸ್ ಕ್ಲೋಸ್ ಮಾಡಿ ಎಂದ ಮಾಜಿ ಸಚಿವರ ಪುತ್ರ

ಮಂಗಳವಾರ, 22 ಸೆಪ್ಟಂಬರ್ 2020 (23:37 IST)
ನನ್ನ ಮೇಲಿರುವ ಡ್ರಗ್ ಕೇಸ್ ಗಳನ್ನು ಕ್ಲೋಸ್ ಮಾಡಿ.

ಹೀಗಂತ ಡ್ರಗ್ ಮಾಫಿಯಾದ ಆರೋಪಿಯಾಗಿರುವ ಆದಿತ್ಯ ಆಳ್ವ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಮಾಜಿ ಸಚಿವ ಜೀವರಾಜ ಆಳ್ವ ಅವರ ಪುತ್ರನಾಗಿರುವ ಆದಿತ್ವ ಆಳ್ವ ಡ್ರಗ್ ಜಾಲದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ.

ಡ್ರಗ್ಸ್ ಮಾಫಿಯಾ ಕೇಸ್ ಹೊರಬೀಳುತ್ತಿರುವಂತೆ ಎಸ್ಕೇಪ್ ಆಗಿದ್ದು, ಈವರೆಗೂ ಪತ್ತೆಯಾಗಿಲ್ಲ.

ತನ್ನನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಬಹುದು ಎಂಬ ಭೀತಿಯಲ್ಲಿರುವ ಆದಿತ್ಯ ಆಳ್ವ, ಇದೀಗ ವಕೀಲರ ಮೂಲಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ತನ್ನ ವಿರುದ್ಧದ ಕೇಸ್ ರದ್ದುಪಡಿಸುವಂತೆ ಕೋರಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ