ಡ್ರಗ್ ಪೆಡ್ಲರ್ ಬಂಧನ

ಭಾನುವಾರ, 15 ಮೇ 2022 (18:44 IST)
ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ ಪೆಡ್ಲರ್‍ನ್ನು ಬಂಧಿಸಿರುವ ಸಿಸಿಬಿ ಪೊಲೀಸರು 5 ಲಕ್ಷ ಬೆಲೆಯ ನಿಷೇದಿತ ಮಾದಕ ವಸ್ತುವಾದ 5ಕೆ.ಜಿ ಗಾಂಜಾ ಮತ್ತು ಇತರೆ ವಸ್ತುಗಳ ವಶ ಪಡಿಸಿಕೊಂಡಿದ್ದಾರೆ.
 
 
ಸಿಸಿಬಿ ಘಟಕದ ಮಾದಕದವ್ಯ ನಿಗ್ರಹ ದಳದ ಅಧಿಕಾರಿಗಳ ತಂಡ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಡ್ರಗ್ ಪೆಡ್ಲಿಂಗ್‍ನಲ್ಲಿ ತೊಡಗಿದ್ದ ಒಬ್ಬನನ್ನು ವಶಕ್ಕೆ ಪಡೆದು, ಆತನಿಂದ ಸುಮಾರು 5ಲಕ್ಷ ಬೆಲೆಯ ನಿಷೇದಿತ ಬೇರು, ಕಾಂಡ, ಹೂ, ಎಲೆ ಮತ್ತು ಬೀಜ ಒಳಗೊಂಡ ಮಾದಕ ವಸ್ತುವಾದ 5 ಕೆಜಿ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ಮೊಬೈಲ್ ಫೋನ್, ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದೆ.
 
ಆರೋಪಿ, ತಲೆಮರೆಸಿ ಕೊಂಡಿರುವ ಇನ್ನೊಬ್ಬ ಆರೋಪಿಯಾದ ಆಂದ್ರ ಮೂಲದ ವ್ಯಕ್ತಿಯಿಂದ ಕೆಜಿ ಗಟ್ಟಲೆ ಗಾಂಜಾವನ್ನು ಕಡಿಮೆ ಬೆಲೆಗೆ ನಗರಕ್ಕೆ ತರಿಸಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಪರಿಚಯಸ್ಥ ಗ್ರಾಹಕರಿಗೆ ಅದರಲ್ಲೂ ವಿಶೇಷವಾಗಿ ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರಿಗೆ 20 ಗ್ರಾಂನತೆ ಪ್ಯಾಕ್ ಮಾಡಿದ ಗಾಂಜಾದ ಪ್ರತಿ ಪ್ಯಾಕ್‍ಗೆ 1,500ರೂ ನಿಂದ 2,000 ರೂಗಳಂತೆ ಮಾರಾಟ ಮಾಡುತ್ತಿದ್ದ ಬಗ್ಗೆ ತಿಳಿದು ಕಾರ್ಯಾಚರಣೆ ನಡೆಸಿದೆ.
 
ಬಂಧಿತ ಆರೋಪಿತನ ವಿರುದ್ದ ಬೇಗೂರು ಪೊಲೀಸ್ ಠಾಣೆಯಲ್ಲಿ ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣದ ದಾಖಲಿಸಿದೆ. ಈ ಕಾರ್ಯಾಚರಣೆಯನ್ನು ಬೆಂಗಳರು ನಗರದ ಸಿಸಿಬಿ ಘಟಕದ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಯಶಸ್ವಿಯಾಗಿ ಕೈಗೊಂಡಿರುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ