ಅರಣ್ಯ ಒತ್ತುವರಿ ತೆರವು ಭೀತಿ, ಕುಟುಂಬಗಳು ಅತಂತ್ರ

ಭಾನುವಾರ, 15 ಮೇ 2022 (16:10 IST)
ಚಿಕ್ಕಮಗಳೂರು :  ಕಾಫಿನಾಡು ಚಿಕ್ಕಮಗಳೂರಿನ ಭದ್ರ ಹುಲಿ ಸಂರಕ್ಷಿತಾರಣ್ಯಕ್ಕೆ ಹೊಂದಿಕೊಂಡಂತೆ ಕೊಂಚ ದೂರದಲ್ಲಿರೋ ಮಸಗಲಿ ಮೀಸಲು ಅರಣ್ಯ ಪ್ರದೇಶ. ಆ ಮೀಸಲು ಅರಣ್ಯ ಪ್ರದೇಶದ ಸುತ್ತಮುತ್ತಲೂ ಹಲವು ದಶಕದಿಂದ ಸುಮಾರು 220ಕ್ಕೂ ಹೆಚ್ಚು ಕುಟುಂಬಗಳಿವೆ. 
 
ಸುಪ್ರಿಂ ಕೋರ್ಟ್ ಈಗಾಗಲೇ ಮೀಸಲು ಅರಣ್ಯದಲ್ಲಿ ಇರುವ ಜನವಸತಿ ಪ್ರದೇಶವನ್ನು ತೆರವು ಮಾಡುವಂತೆ ಅದೇಶ ಹೊರಡಿಸಿದೆ. ಅಧಿಕಾರಿಗಳಂತೂ ಪುಲ್ ರೆಡಿಯಾಗಿಯೇ ನಿಂತಿದ್ದಾರೆ. 144 ಸೆಕ್ಷನ್ ಹಾಕಿ ತೆರೆವು ಕಾರ್ಯಚರಣೆಯ ಸಿದ್ದತೆಯನ್ನು ಮಾಡಿದ್ದರೂ, ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮ ತೆರವು ಕಾರ್ಯಚರಣೆಗ ತಾತ್ಕಲಿಕವಾಗಿ ಬ್ರೇಕ್ ಬಿದ್ದಿದೆ. ಇದರ ನಡುವೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತೊಂದು ಪ್ರಸ್ತಾವನೆ ಇಟ್ಟಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. 
 
ಮಸಗಲಿ ಮೀಸಲು ಅರಣ್ಯದಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಪರಿಹಾರ ನೀಡಲು ಇಲಾಖೆ ಮುಂದಾಗಿದೆ. ಆದ್ರೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಈ ಗ್ರಾಮದಲ್ಲಿ ರೈತರು  ಒಂದು ಎಕರೆ, ಎರಡು ಎಕರೆಯಲ್ಲಿ ಕೃಷಿ ಮಾಡ್ಕೊಂಡಿದ್ರು. ಇದು ಅರಣ್ಯದ ವ್ಯಾಪ್ತಿಗೆ ಬರಲಿದೆ. ಇದಕ್ಕೆ ಮೊದಲು ಪರಿಹಾರ ಕೊಡ್ತೀವಿ ಅಂತಾ ಹೇಳಿದ ಅಧಿಕಾರಿಗಳು ಇದೀಗ ಯಾವುದೇ ಪರಿಹಾರ ನೀಡ್ತಿಲ್ಲ ಅನ್ನೋದು ಸ್ಥಳೀಯರ ಆರೋಪ.
 
ಇನ್ನೂ ಈ ತೆರವು ವಿವಾದವಂತೂ ಇಂದು ನಿನ್ನೆಯದಲ್ಲ. ಒಂದು ದಶಕದಿಂದ ನಡೆಯುತ್ತಲೇ ಇದೆ. ಅದ್ರೆ ಈಗ ಸುಪ್ರಿಂಕೋರ್ಟ್  ತೀರ್ಪಿನಂತೆ ತೆರವು ಮಾಡಲೇಬೇಕು ಇಲ್ಲಾಂದ್ರೆ ಕೋರ್ಟ್  ಆದೇಶ ಉಲ್ಲಂಘನೆಯಾಗುತ್ತೇ ಅನ್ನೋದು ಅಧಿಕಾರಿಗಳಿಗೆ ಗೊತ್ತಾಗ್ತಾ ಇದ್ದಂತೆ ಆಲಾರ್ಟ್ ಅಗಿ ಕಾರ್ಯಚರಣೆ ನಡೆಸೋಕೆ ಮುಂದಾಗಿದ್ದರು.
 
ಅದ್ರೆ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಕೊಂಚ ದಿನ ಮುಂದೂಡಿದ್ದಾರೆ.ಆದರೂ
ಸಮಸ್ಯೆಯನ್ನು ಬಗೆಹರಿಸೋಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಯ್ತು. ಪರ್ಯಾಯ ಭೂಮಿಯನ್ನಾದ್ರೂ ಅಥವಾ ಪರಿಹಾರವನ್ನಾದ್ರೂ ನೀಡೋಕೆ ಅಗುತ್ತಾ ಅಂತಾ ಸರ್ಕಾರ ಮುಂದೇ ಮನವಿ ಮಾಡೋಕೆ ಮುಂದಾಗಿದ್ಧಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ