ಡ್ರಗ್ಸ್ ಮಾಫಿಯಾ : ಮಾಜಿ ಸಚಿವರ ಪುತ್ರನ ಮನೆ ಮೇಲೆ ಸಿಸಿಬಿ ದಾಳಿ
ಸ್ಯಾಂಡಲ್ ವುಡ್ ನಟಿಯರು ಡ್ರಗ್ಸ್ ಮಾಫಿಯಾದಲ್ಲಿ ಬಂಧನಕ್ಕೆ ಒಳಗಾದ ಬಳಿಕ ಹಲವು ಪ್ರಮುಖರ ಹೆಸರುಗಳು ಕೇಳಿಬರತೊಡಗಿವೆ.
ರೆಸಾರ್ಟ್ ನಲ್ಲಿ ವೀಕೆಂಡ್ ಪಾರ್ಟಿಗಳನ್ನು ಮಾಡಲಾಗುತ್ತಿತ್ತು. ಡ್ರಗ್ಸ್ ಔಷಧವನ್ನು ಇಲ್ಲಿ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಸೇವಿಸಲಾಗುತ್ತಿತ್ತು ಎಂಬುದನ್ನು ವಿಚಾರಣೆ ವೇಳೆ ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ಧಾರೆ ಎನ್ನಲಾಗಿದ್ದು, ರೆಸಾರ್ಟ್ ಮ್ಯಾನೇಜರ್ ರಾಮದಾಸ್ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ನಡುವೆ ನಾಪತ್ತೆಯಾಗಿರುವ ಆದಿತ್ಯ ಆಳ್ವಾ ಈ ವರೆಗೂ ಪತ್ತೆಯಾಗಿಲ್ಲ.