ಮುಂದಿನ ತಿಂಗಳಿಗೆ ಅಕ್ಕಿ ಹೊಂದಿಸಲು ಪ್ರಯತ್ನ ನಡೆದಿದೆ : ಕೆ ಎಚ್ ಮುನಿಯಪ್ಪ

ಶುಕ್ರವಾರ, 18 ಆಗಸ್ಟ್ 2023 (15:25 IST)
ಮುಂದಿನ ತಿಂಗಳಿಗೆ ಅಕ್ಕಿ ಹೊಂದಿಸಲು ಪ್ರಯತ್ನ ನಡೆದಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ.ಆಂಧ್ರಪ್ರದೇಶದ ಸಚಿವರ ಜೊತೆ ಮಾತುಕತೆ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು ಒಂದು ವಾರದ ಒಳಗೆ ಚರ್ಚೆ ಮಾಡಿ ಹೇಳ್ತೇವೆ ಅಂದಿದ್ದಾರೆ. ಅದೆ ರೀತಿಯಲ್ಲಿ ತೆಲಂಗಾಣ ಸಚಿವರ ಜೊತೆ ಮಾತುಕತೆ ಮಾಡಿದ್ದೇನೆ.
 
ಅವರು ಒಂದು ವಾರ ಸಮಯ ಕೇಳಿದ್ದಾರೆ. ನಮಗೆ ಬೇಕಾದ ಅಕ್ಕಿ ಲಭ್ಯತೆ ಇದೆ.ರೈತರಿಂದ ಖರೀದಿ ಮಾಡುತ್ತಿದ್ದಾರೆ. ಎಫ್ ಸಿ ಐ ದರದಲ್ಲಿ ಕೊಡಿ ಅಂತ ಹೇಳಿದ್ದೇವೆ. ಆದ್ರೆ ನಮಗೆ ೪೦ ರೂಪಾಯಿಗೆ ಅಕ್ಕಿ ಸಿಗಬಹುದು. ಡೆಲಿವರಿ ಕೂಡ ಅವರಿಗೆ ಹೇಳಿದ್ದೇನೆ. ಒಟ್ಟು ಹಣ ಎಷ್ಟಾಗುತ್ತೆ ಅಂತ ಹೇಳಲು ಹೇಳಿದ್ದೇವೆ. ೩೯-೪೦ ರೂಪಾಯಿಗೆ ಅವರು ಕೊಡಲು ಒಪ್ಪಿದ್ರೆ ನಾವು ಕೂತು ತೀರ್ಮಾನ ಮಾಡುತ್ತೇವೆ.ಆದಷ್ಟು ಬೇಗ ಅಕ್ಕಿ ಕೊಡಲು‌ ಪ್ರಯತ್ನ ಮಾಡುತ್ತಿದ್ದೇವೆ.ಮುಂದಿನ ತಿಂಗಳಿಗೆ ಹೊಂದಿಸಲು ಪ್ರಯತ್ನ ನಡೆದಿದೆ ಎಂದು ಹೇಳಿದರು.

ಈ ತಿಂಗಳ ಹಣ ವರ್ಗಾವಣೆ ಡಿಬಿಟಿ ಈ ವಾರದಿಂದ ಆಗುತ್ತೆ.ಇಲಾಖೆಗೆ ಯಾವುದೇ ಹಣದ ಕೊರತೆ ಇಲ್ಲ. ಬಜೆಟ್ ನಲ್ಲಿ ಹತ್ತು ಸಾವಿರ ಕೋಟಿ‌ ಕೊಟ್ಟಿದ್ದಾರೆ. ಅಕ್ಕಿ‌ಕೊಡುವ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿದ್ದೇವೆ.ಅದನ್ನು ಪೂರೈಸಬೇಕು.ಸಿಎಂ ಗೂ  ಸಾಕಷ್ಟು ಅನುಭವ ಇದೆ.ಹಿಂದೆ ಅವರೆ ಅನ್ನಭಾಗ್ಯ ಯೋಜನೆ ತಂದಿದ್ದು.ಆದ್ದರಿಂದ ಅನ್ನಭಾಗ್ಯ ಯೋಜನೆಗೆ ಯಾವುದೇ ಕೊರತೆಯಿಲ್ಲ ಎಂದರು.
 
ಹೊಸ ರೇಷನ ಕಾರ್ಡ್ ವಿಚಾರವಾಗಿ ಪ್ರತಿಕ್ರಿಯಿಸಿ ವೈದ್ಯಕೀಯ ಸೌಲಭ್ಯಕ್ಕೆ ಆದ್ಯತೆ ನೀಡಿದ್ದೇವೆ.ಕೆಲವರು ವೈದ್ಯಕೀಯ ಸೌಲಭ್ಯಕ್ಕೆ ಮಾತ್ರ ಕಾರ್ಡ್ ಕೇಳುತ್ತಿದ್ದಾರೆ.ಹೊಸ ಕಾರ್ಡ್ ಕೊಡಲು ತೀರ್ಮಾನ ಮಾಡಿದ್ದೇವೆ. ಮೂರು ಲಕ್ಷ ಅರ್ಜಿಗಳು ಬಂದಿದ್ದಾವೆ. ಚುನಾವಣೆ ಕಾರಣ ವಿಳಂಬ ಆಗಿದೆ. ಆದಷ್ಟು ಬೇಗ ಅರ್ಜಿ ವಿಲೇವಾರಿ ಮಾಡುತ್ತೇವೆ. ಕಾರ್ಡ್ ತಿದ್ದುಪಡಿ ಕೂಡ ಆದಷ್ಟು ಬೇಗ ಮಾಡುತ್ತೇವೆ. ಇವತ್ತಿನಿಂದ ಕಾರ್ಡ್ ತಿದ್ದುಪಡಿ ಸರ್ವರ್ ಓಪನ್ ಆಗಿದೆ ಎಂದರು.
 
ಸಚಿವರು ಎರಡುವರೆ ವರ್ಷ ವಿಚಾರವಾಗಿ ಮಾತನಾಡಿ ಇದು ಪಕ್ಷದ ಆಂತರಿಕ ವಿಚಾರದಲ್ಲಿ ಮಾತನಾಡಿದ್ದೆ. ಕೆಲವರು ಮೂರ್ನಾಕು ಬಾರಿ ಗೆದ್ದಿದ್ದಾರೆ. ಅವರಿಗೂ ಅವಕಾಶ ಮಾಡಿ ಕೊಡಬೇಕು. ಇದನ್ನು ಸಿಎಂ,ಡಿಸಿಎಂ ಹೈಕಮಾಂಡ್ ನಿರ್ಧಾರ ಮಾಡುತ್ತೆ.ಪಕ್ಷ ಬಲವರ್ಧನೆ ಮಾಡಲು ತ್ಯಾಗಕ್ಕೆ ಸಿದ್ದವಾಗಬೇಕು. ನಾನು ಸ್ಥಾನ ಬಿಟ್ಟುಕೊಡಲು ಸಿದ್ದನಿದ್ದೇನೆ.ಎಲ್ಲರಿಗೂ ನಾವು ಮಾದರಿ ಆಗಬೇಕು. ಬೇರೆ ಸಚಿವರ ವಿಚಾರ ನನಗೆ ಗೊತ್ತಿಲ್ಲ.ಪಾಪ ಅವರು ಮುಕ್ತವಾಗಿ ಕೆಲಸ ಮಾಡಲಿ. ಸಿಎಂ, ಡಿಸಿಎಂ ಬದಲಾವಣೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಹೇಳಿದರು‌.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ