ಕದ್ದು ತಂದ ಆನೆ ದಂತಗಳನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸಲು ಯತ್ನ

ಶುಕ್ರವಾರ, 8 ಅಕ್ಟೋಬರ್ 2021 (20:44 IST)
ಕದ್ದು ತಂದ ಆನೆ ದಂತಗಳನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸಲು ಯತ್ನಿಸುತ್ತಿದ್ದ ಇಬ್ಬರು ದಂತ ಚೋರರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. 
ಮಡಿಕೇರಿ ಮೂಲದ ಮಹಮ್ಮದ್ ಸೈಫ್ (26), ಸುಹೇಲ್ (30) ಬಂಧಿತರು. ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಎರಡು ಆನೆ ದಂತಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೆÇಲೀಸರು ತಿಳಿಸಿದರು. 
ಆರೋಪಿಗಳು ಮಡಿಕೇರಿಯ ಕಾಡಂಚಿನ ಭಾಗದಲ್ಲಿ ಪ್ರಮುಖ ದಂತಚೋರನೊಬ್ಬನಿಂದ ಆನೆ ದಂತಗಳನ್ನು ಖರೀದಿಸಿದ್ದರು. ಇದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲೆಂದು ನಗರಕ್ಕೆ ತಂದಿದ್ದರು. ಅ.4ರಂದು ಅನ್ನಪೂರ್ಣೇಶ್ವರಿ ಪೆÇಲೀಸ್ ಠಾಣೆ ವ್ಯಾಪ್ತಿಯ ಬಿಡಿಎ ಕಾಂಪ್ಲೆಕ್ಸ್ ಎದುರುಗಿನ ಲಾರಿ ನಿಲ್ದಾಣದಲ್ಲಿ ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಭಾತ್ಮಿದಾರರೊಬ್ಬರು ಠಾಣೆ ಇನ್ಸ್‍ಪೆಕ್ಟರ್ ಬಿ.ಎನ್. ಲೋಹಿತ್ ಅವರಿಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿ ಆಧರಿಸಿ ಸಿಬ್ಬಂದಿ ಜತೆ ದಾಳಿ ಮಾಡಿ ಇನ್ಸ್‍ಪೆಕ್ಟರ್ ದಂತಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. 
ಮಹಮ್ಮದ್ ಸೈಫ್ ಮತ್ತು ಸುಹೇಲ್ ಇಬ್ಬರು ವಿದ್ಯಾವಂತರಾಗಿದ್ದಾರೆ. ಓರ್ವ ಶೋರೂಂವೊಂದರಲ್ಲಿ ಕೆಲಸ ಮಾಡುತ್ತಿದ್ದ. ಮತ್ತೊಬ್ಬ ಪದವಿ ಪೂರೈಸಿ ಕೆಲಸ ಹುಡುಕುತ್ತಿದ್ದ. ಹೆಚ್ಚಿನ ಹಣಗಳಿಕೆ ಆಸೆಯಿಂದ ಆನೆದಂತಗಳ ಮಾರಾಟಕ್ಕಿಳಿದಿದ್ದರು. ಇವರಿಗೆ ದಂತಗಳನ್ನು ಮಾರಾಟ ಮಾಡಿದ್ದ  ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧ ನಡೆಸಲಾಗುತ್ತಿದೆ. 
ಆರೋಪಿಗಳ ವಿರುದ್ಧ ಅನ್ನಪೂರ್ಣೇಶ್ವರಿನಗರ ಪೆÇಲೀಸ್ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ