ಬಾಡಿಗೆ ಮನೆ ಕೇಳುವ ನೆಪದಲ್ಲಿ ಬೀಗ ಹಾಕಿರುವ ಮನೆಗಳನ್ನ ಗುರುತಿಸಿ ಮನೆಗಳವು

ಶುಕ್ರವಾರ, 8 ಅಕ್ಟೋಬರ್ 2021 (20:38 IST)
ಬಾಡಿಗೆ ಮನೆ ಕೇಳುವ ನೆಪದಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಮನೆಗಳವು ಮಾಡುತ್ತಿದ್ದ ಪ್ರೇಮಿಗಳಿಬ್ಬರನ್ನು ಚಂದ್ರಾ ಲೇಔಟ್ ಠಾಣೆ ಪೆÇಲೀಸರು ಬಂಧಿಸಿದ್ದಾರೆ. 
ಚಂದ್ರಾ ಲೇಔಟ್‍ನ ವಿನಯ್ (32), ಹೊಯ್ಸಳ ನಗರದ ಕೀರ್ತನಾ (25) ಬಂಧಿತ ಪ್ರೇಮಿಗಳು. ಹಣ ಗಳಿಸಲು ಕಳವು ಮಾರ್ಗ ಹಿಡಿದ ಪ್ರೇಯಸಿಗೆ ವಿನಯ್ ಸಾಥ್ ನೀಡಿದ್ದ. ಇದನ್ನು ಮುಂದುವರಿಸುವಂತೆ ಪ್ರಿಯಕರನಿಗೆ ಪ್ರೇಯಸಿಯೇ ಒತ್ತಾಯಿಸುತ್ತಿದ್ದಳು. ಪ್ರಿಯಕರ ಹೊರಗೆ ನಿಂತು ನೋಡಿಕೊಂಡರೆ ಕೀರ್ತನಾ ಮನೆಯೊಳಗೆ ತೆರಳಿ ಕಳ್ಳತನ ಮಾಡಿಕೊಂಡು ಇಬ್ಬರು ಪರಾರಿಯಾಗುತ್ತಿದ್ದರು ಎಂದು ತಿಳಿದು ಬಂದಿದೆ. 
ವಿನಯ್ ವಿರುದ್ಧ ಆರು ಪ್ರಕರಣಗಳು ದಾಖಲಾಗಿದ್ದು, ಈತ ರಾಜಾಜಿನಗರದ ರೌಡಿಶೀಟರ್ ಆಗಿದ್ದಾನೆ. ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದ ಬಳಿಕ ನಾಲ್ಕು ವರ್ಷಗಳ ಹಿಂದೆ ಕೀರ್ತನಾಳನ್ನು ಪ್ರೇಮಬಲೆಯಲ್ಲಿ ಬೀಳಿಸಿಕೊಂಡಿದ್ದ. ಕೀರ್ತನಾ ಪಿಯುಸಿ ಅನುತ್ತೀರ್ಣಳಾಗಿದ್ದಳು. ಈಕೆ ಪರೀಕ್ಷೆಗೆ ತರಬೇತಿ ಪಡೆಯಲು ಹೋಗುತ್ತೇನೆ ಎಂದು ಮನೆಯಲ್ಲಿ ತನ್ನ ತಾಯಿಗೆ ಸುಳ್ಳು ಹೇಳಿ ಮನೆಯಿಂದ ಹೊರಬಂದು ವಿನಯ್ ಜತೆ ಪ್ರೇಮ ಸಲ್ಲಾಪದಲ್ಲಿ ತೊಡಗುತ್ತಿದ್ದಳು. 
 ಹಣದ ಅವಶ್ಯಕತೆ ಬಿದ್ದಾಗ ಕಳ್ಳತನಕ್ಕೆ ಸಂಚು ರೂಪಿಸಿದ ಕೀರ್ತನಾ, ತನ್ನ ಪ್ರಿಯತಮನ ನೆರವು ಪಡೆದು ಕಳವು ಮಾಡಲು ಸಜ್ಜಾಗಿದ್ದಳು. ವಿನಯ್ ಜತೆ ಬೈಕ್‍ನಲ್ಲಿ ಚಂದ್ರಾಲೇಔಟ್ ಸುತ್ತಾಡಿದ ಕೀರ್ತನಾ, ಮನೆ ಬಾಡಿಗೆ ಇದೆ ಎಂಬ ಫಲಕ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದಳು. ಬೀಗ ಹಾಕಿರುವ ಮನೆ ಗುರುತಿಸಿ ನಕಲಿ ಕೀ ಬಳಸಿ ಬೀಗ ತೆಗೆದು ಮನೆಗಳವು ಮಾಡಿ ಇಬ್ಬರು ಪರಾರಿಯಾಗಿದ್ದರು. ಮನೆ ಮಾಲೀಕ ಕುಲಶೇಖರ್ ಎಂಬುವರು ತಮ್ಮ ಮನೆ ಕಳವಾಗಿರುವ ಬಗ್ಗೆ ಚಂದ್ರಾ ಲೇಔಟ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. 
ಕಾರ್ಯಾಚರಣೆಗಿಳಿದ ಪೆÇಲೀಸರು ಮನೆಯ ಹತ್ತಿರದ ರಸ್ತೆಗಳಲ್ಲಿರುವ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ