ರೈತರ ಮೇಲಿನ ಹತ್ಯೆ ಪ್ರಕರಣದಲ್ಲಿ 8 ಜನ ರೈತರು ಸಾವು

ಗುರುವಾರ, 14 ಅಕ್ಟೋಬರ್ 2021 (20:45 IST)
ಉತ್ತರ ಪ್ರದೇಶ ಲಖೀಂಪುರ ಖೇರಿ ಪ್ರತಿಭಟನಾ ನಿರತ ರೈತರ ಮೇಲಿನ ಹತ್ಯೆ ಪ್ರಕರಣದಲ್ಲಿ 8 ಜನ ರೈತರು ಸಾವನಪ್ಪಿದ್ದು, ಘಟನೆಗೆ ಸಂಬಂಧಪಟ್ಟಂತೆ  ಕೇಂದ್ರ ಸಚಿವ ಅಜಯ್​ ಮಿಶ್ರಾ ಪುತ್ರ ಆಶೀಶ್​ ಪುತ್ರ ಹಾಗೂ ಕಾರು ಚಾಲಕ ಅಂಕಿತ್​ದಾಸ್​ ಹಾಗೂ ಲತೀಫ್​ ಕಾಳೆಯವರನ್ನು ಎಸ್​ಐಟಿ ಅಧಿಕಾರಿಗಳು ಅಕ್ಟೋಬರ್​ 3 ರಂದು ಬಂಧಿಸಿದ್ರು. 
ಇನ್ನು ಘಟನೆಗೆ ಸಂಬಂಧ ಪಟ್ಟಂತೆ ಇಂದು ಸೆಷನ್​ ಕೋರ್ಟ್​ನಲ್ಲಿ ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಲಾಯಿತು. ಸೇಷನ್​ ಕೋರ್ಟ್​ನ ಮುಖ್ಯ ನ್ಯಾಯಾಧೀಶ ಚಿಂತಾರಾಮ್​ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು ಆದ್ರೆ ಇಂದು ಸಹ ಆಶೀಶ್​ ಹಾಗೂ ಸಹಚರರಿಗೆ ಇಂದು ಜಾಮೀನು ನೀಡಲು ಕೋರ್ಟ್​ ನಿರಾಕರಿಸಿದೆ ಎಂದು ಹಿರಿಯ ಅಧಿಕಾರಿ ಎಸ್​.ಪಿ.ಯಾದವ್​ ತಿಳಿಸಿದ್ದಾರೆ.

ಇನ್ನು ಲಖೀಂಪುರ ಖೇರಿ ಘಟನೆ ಕುರಿತಾಗಿ ಅಖಿಲೇಶ್​ ಯಾದವ್​ ಪ್ರತಿಕ್ರಿಯಿಸಿದ್ದು, ಉ.ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಕಾರ್ಯಕರ್ತರು ರೈತರ ಮೇಲೆ ವಾಹನ ಹರಿಸಿ ಹತ್ಯೆ ಮಾಡಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಗೊಬ್ಬರ ಕಳ್ಳ ಸರ್ಕಾರವಾಗಿದೆ ಜೊತೆಗೆ ಬೆಲೆ ಏರಿಕೆ ಹಾಗೂ ಕೀಟನಾಶಕಗಳ ಬೆಲೆ ಏರಿಕೆಯ ಹಿಂದೆ ಸರ್ಕಾರದ ಕೈವಾಡವಿದೆ ಎಂದು ಮಾಜಿ ಸಿಎಂ ಅಖಿಲೇಶ್​ ಯಾದವ್​ ಗಂಭೀರ ಆರೋಪ ಮಾಡಿದ್ದಾರೆ. ಇಷ್ಟಲ್ಲದೇ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ಅವರನ್ನು ನಕಲಿ ಬಾಬ ಎಂದು ಎಂದು ರಥಯಾತ್ರೆ ಸಂದರ್ಭದಲ್ಲಿ ಹೇಳಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ