ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಮಾಲೀಕರು vs ಆಟೋ ಚಾಲಕರ ಜಟಾಪಟಿ ಪ್ರಾರಂಭ

ಗುರುವಾರ, 8 ಡಿಸೆಂಬರ್ 2022 (17:35 IST)
ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗೆ ಪರವಾನಗಿ ನೀಡಲು ತೀರ್ಮಾನಿಸಿದ ಪ್ರಾಧಿಕಾರದ ಕ್ರಮಕ್ಕೆ ಆಟೋ ರಿಕ್ಷಾ, ಟ್ಯಾಕ್ಸಿ ಮಾಲೀಕರ ಸಂಘದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.ಪ್ರಾಧಿಕಾರದ ನಿರ್ಧಾರಕ್ಕೆ  ಆದರ್ಶ ಆಟೋ ಚಾಲಕರ ಸಂಘದಿಂದ ತೀವೃ ವಿರೋಧ ವ್ಯಕ್ತವಾಗಿದ್ದು,ಸರಕಾರ ಇಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದ್ರೆ ಸಿಎಂ ಮನೆಗೆ ಮುತ್ತಿಗೆ ಹಾಕುವುದಾಗಿ ಆದರ್ಶ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ ಎಚ್ಚರಿಕೆ ನೀಡಿದ್ದಾರೆ.
 
ಸರಕಾರ ಈ ಕುರಿತಂತೆ ಸಭೆ ನಡೆಸಿದ್ದು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಲು ಮುಂದಾಗಿದೆ.ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘದ ವತಿಯಿಂದ ನಾವು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ.ಸರಕಾರದ ಈ ನಿರ್ಧಾರದಿಂದ ಆಟೋ ಹಾಗೂ ಟ್ಯಾಕ್ಸಿ ಮಾಲೀಕರ ಮೇಲೆ ಪರಿಣಾಮ ಬೀರಲಿದೆ.ಈಗಾಗಲೇ ಕೊರೊನಾ ಸಂದರ್ಭದಲ್ಲಿ ನಾವು ಸಾಕಷ್ಟು ತೊಂದರೆಗೆ ಒಳಗಾಗಿದ್ದು, ಇನ್ನೂ ಚೇತರಿಸಿಕೊಂಡಿಲ್ಲ.ಇದೇ ವೇಳೆ ಸರ್ಕಾರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎನ್ನುವಂತೆ ಎಲೆಕ್ಟ್ರಿಕ್ ಬೈಕ್ ಟ್ರಾಕ್ಸಿಗೆ ಅನುಮತಿ ನೀಡುತ್ತಿದೆ.ಕೂಡಲೇ ಸರ್ಕಾರ ಈ ನಿರ್ಧಾರವನ್ನು ಕೈ ಬಿಡಬೇಕು.ಸರ್ಕಾರ ಈ ನಿಯಮ ಜಾರಿಗೊಳಿಸಿದ್ರೆ ಬೆಂಗಳೂರು ನಗರ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘದಿಂದ ಹೋರಾಟ ಮಾಡಬೇಕಾಗುತ್ತದೆ.ಜೊತೆಗೆ ಸಿಎಂ ಮನೆಗೆ ಮುತ್ತಿಗೆ ಹಾಕುವುದಾಗಿ ಆದರ್ಶ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ