ಆನೆ ದಾಳಿಗೆ ಮಲೆನಾಡಿಗರು ಕಂಗಾಲು

ಬುಧವಾರ, 29 ಆಗಸ್ಟ್ 2018 (13:52 IST)
ಒಂದೆಡೆ ಅತೀ ಮಳೆಯಿಂದಾಗಿ ಬೆಳೆದ ಬೆಳೆಗಳೆಲ್ಲ ನಾಶವಾದರೆ, ಇನ್ನೊಂದೆಡೆ ಅಲ್ವ ಸ್ವಲ್ಪ ಅಳಿದು ಉಳಿದ ಬೆಳೆಗಳನ್ನು ಕಾಡಾನೆ ದಾಳಿಯಿಂದ ಉಳಿಸಿಕೊಳ್ಳಲಾಗದೆ ಬೆಳೆಗಾರ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.

ಮಲೆನಾಡಿನ ರೈತರು ಒಂದೆಡೆ ಮಳೆಯಿಂದ ಈಗಾಗಲೇ ಕಂಗಲಾಗಿದ್ದಾರೆ. ಈಗ ವನ್ಯಪ್ರಾಣಿಗಳ ಹಾವಳಿಯಿಂದ ಮತ್ತಷ್ಟು ಸಂಕಷ್ಟಕ್ಕೆ ಈಡಾಗುವಂತೆ ಆಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗುತ್ತಿಹಳ್ಳಿ, ಮೂಲರಹಳ್ಳಿ, ಬೈರಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳು ಬೀಡು ಬಿಟ್ಟಿವೆ. ಕಾಡಾನೆ ಹಾವಳಿಯಿಂದ ಬಾಳೆ, ಕಾಫಿ, ಮೆಣಸು, ಭತ್ತ ಸಂಪೂರ್ಣ ನಾಶವಾಗಿದೆ.

ರಾತ್ರಿ ವೇಳೆ ಆನೆಗಳು ದಾಳಿ ಮಾಡಿ   ಮೂಲರಹಳ್ಳಿ ರಘು ಹಾಗೂ ನಾಲ್ಕೈದು ಜನರ ತೋಟದ ಬಾಳೆ ಹಾಗೂ ಕಾಫಿ ಬೆಳೆ ನಾಶಮಾಡಿವೆ. ಹಲವಾರು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಸ್ಥಳಕ್ಕೆ ಬಾರದ ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ