ಜಯನಗರ ವಾಣಿಜ್ಯ ಸಂಕೀರ್ಣ(ಕಾಂಪ್ಲೆಕ್ಸ್)ದ ಬಳಿ ಒತ್ತುವರಿ ತೆರವು ಕಾರ್ಯಾಚರಣೆ

ಬುಧವಾರ, 8 ಫೆಬ್ರವರಿ 2023 (19:22 IST)
ದಕ್ಷಿಣ ವಲಯದ ಜಯನಗರ ವಾಣಿಜ್ಯ ಸಂಕೀರ್ಣ(ಕಾಂಪ್ಲೆಕ್ಸ್)ದ ಬಳಿ ಪಾದಚಾರಿ ಮಾರ್ಗ, ಪಾರ್ಕಿಂಗ್ ಪ್ರದೇಶ, ಮಾರುಕಟ್ಟೆ ಕಾರಿಡಾರ್ ಮತ್ತು ಅಕ್ಕಪಕ್ಕದ ಸುಮಾರು 250 ತಾತ್ಕಾಲಿಕ ಮಳಿಗೆಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ.
 
ಜಯನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ: 169ರ ವ್ಯಾಪ್ತಿಯಲ್ಲಿ ಮಾನ್ಯ ಮುಖ್ಯ ಆಯುಕ್ತರು, ಮಾನ್ಯ ವಲಯ ಆಯುಕ್ತರು(ದಕ್ಷಿಣ) ಹಾಗೂ ಸ್ಥಳೀಯ ಶಾಸಕರು, ಜಯನಗರ ವಿಧಾನಸಭಾ ಕ್ಷೇತ್ರ ರವರು ದಿನಾಂಕ:27-01-2023 ರಂದು ಜಯನಗರ ವಾಣಿಜ್ಯ ಸಂಕೀರ್ಣದ ತಪಾಸಣೆಯ ಸಮಯದಲ್ಲಿ ಕೈಗೊಂಡ ತೀರ್ಮಾನದಂತೆ, ಇಂದು ವಲಯ ಜಂಟಿ ಆಯುಕ್ತರು(ದಕ್ಷಿಣ), ಮುಖ್ಯ ಅಭಿಯಂತರರು(ದಕ್ಷಿಣ) ರವರ ನೇತೃತ್ವದಲ್ಲಿ ಪೊಲೀಸ್ ಹಾಗೂ ಮಾರ್ಷಲ್‌ಗಳ ನೆರವಿನೊಂದಿಗೆ ಒತ್ತುವರಿ ತೆರವುಗೊಳಿಸಲಾಗಿದೆ.
 
ಜಯನಗರ ವಾಣಿಜ್ಯ ಸಂಕೀರ್ಣದ ಸೆಟ್ ಬ್ಯಾಕ್ ಪ್ರದೇಶಗಳು ಮತ್ತು ಕಾರಿಡಾರ್‌ಗಳಲ್ಲಿ ಹಾಗೂ ಸುತ್ತಮುತ್ತ ಪಾದಚಾರಿ ಮಾರ್ಗಗಳನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ವ್ಯಾಪಾರ-ವಹಿವಾಟುಗಳನ್ನು ನಡೆಸಿ, ಸಾರ್ವಜನಿಕರಿಗೆ ಅನಾನುಕೂಲ ಉಂಟು ಮಾಡುತ್ತಿದ್ದ ಸುಮಾರು 250 ತಾತ್ಕಾಲಿಕ ಮಳಿಗೆಗಳನ್ನು ಸ್ಥಳೀಯ ಪೊಲೀಸ್ ಇಲಾಖೆಯ ನೆರವಿನೊಂದಿಗೆ ತೆರವುಗೊಳಿಸಲಾಯಿತು ಹಾಗೂ ಇನ್ನು ಮುಂದೆ ಒತ್ತುವರಿ ಮಾಡಿಕೊಂಡು, ವ್ಯಾಪಾರ-ವಹಿವಾಟು ಮಾಡದಂತೆ ಎಚ್ಚರಿಗೆ ನೀಡಿ, ಯಾವುದೇ ಒತ್ತುವರಿಯಾಗದಂತೆ ತಡೆಯಲು ಮಾರ್ಷಲ್‌ಗಳನ್ನು ನಿಯೋಜಿಸಲು ಕ್ರಮಕೈಗೊಳ್ಳಲಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ