ಮೊದಲ ದಿನವೇ ವೃದ್ಧರಿಂದ ಮತ್ತು ವಿಶೇಷ ಚೇತನರಿಂದ ಮತದಾನಕ್ಕೆ ಉತ್ಸಹ,,!

ಶನಿವಾರ, 29 ಏಪ್ರಿಲ್ 2023 (18:39 IST)
ರಾಜ್ಯದಲ್ಲಿ ಬಹು ನಿರೀಕ್ಷಿತ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ.. ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸ್ತಿದ್ದು ಕದನದ ಕಣದಲ್ಲಿ ಗೆಲ್ಲುವ ಕಲಿ ಯಾರಾಗ್ತಾರೆ ಅನ್ನೋ ಕೌತುಕ ರಾಜ್ಯದಲ್ಲಿ ಮನೆ ಮಾಡಿದೆ. ಈ ಮಧ್ಯೆ ಇಂದಿನಿಂದ ಬ್ಯಾಲೆಟ್ ಪೇಪರ್ ಮತದಾನ ಆರಂಭವಾಗಿದೆ. 80 ವರ್ಷ ಮೇಲ್ಪಟ್ಟ ವೃದ್ಧರು, ಹಾಗೂ ವಿಶೇಷ ಚೇತನರು, ಚುನಾವಣಾ ಸಿಬ್ಬಂದಿ ಹಾಗೂ ಪೊಲೀಸರಿಗೆ ಇವತ್ತು ಮತದಾನ ಮಾಡಲು ಅವಕಾಶ ಕಲ್ಪಿಸಿ ಕೊಡಲಾಗಿದೆ. ಅದರಲ್ಲೂ 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರು ಮನೆಯಲ್ಲಿಯೇ ಕೂತು ವೋಟ್ ಮಾಡಿದ್ದಾರೆ. 
 
ಇವತ್ತಿನಿಂದ  ಮೇ 6 ರವರೆಗೆ ಬ್ಯಾಲೇಟ್ ಮತದಾನಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿದ್ದು, ರಾಜ್ಯ ಸೇರಿದಂತೆ ರಾಜಧಾನಿ ಬೆಂಗಳೂರಿನಲ್ಲೂ ಬ್ಯಾಲೇಟ್ ಪೇಪರ್ ವೋಟಿಂಗ್ ನಡೆಸಲಾಗಿತ್ತು. ಚುನಾವಣಾ ಅಯೋಗದ ಸಿಬ್ಬಂದಿಗಳಿಂದ 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಮನೆ ಬಳಿ ತೆರಳಿ ಬ್ಯಾಲೆಟ್ ಪೇಪರ್ ನೀಡಿ ಗೌಪ್ಯವಾಗಿ ಮತ ಚಲಾವಣೆ ಮಾಡಲಾಯಿತು. ಗೌಪ್ಯ ಮತ ಚಲಾಯಿಸುವಾಗ ಇಬ್ಬರು ಪೋಲಿಂಗ್ ಆಫೀಸರ್,  ಮೈಕ್ರೋ ಅಬ್ಸರ್ವರ್ , ವೀಡಿಯೋ ಗ್ರಾಫರ್, ಪಾರ್ಟಿ ಏಜೆಂಟ್ಸ್ ಸೇರಿದಂತೆ ಸ್ಥಳೀಯ ಪೊಲೀಸರು ಹಾಜರಿದ್ದರು. ಜೊತೆಗೆ ಈ ಪ್ರಕ್ರಿಯೆ  ಮಾಡುವಾಗ ವಿಡಿಯೋ ರೇಕಾರ್ಡಿಂಗ್ ಮಾಡಲಾಗುತ್ತೆ. ಮತದಾನದ ನಂತರ ಸ್ಟ್ರಾಂಗ್ ರೂಮ್ ಗೆ ಮತ ಪೆಟ್ಟಿಗೆ ಶಿಪ್ಟ್  ಮಾಡಲಾಗುತ್ತೆ. ಈ ಎಲ್ಲಾ ಮತಗಳನ್ನೂ ಮೇ 13 ರಂದು ಮತ ಏಣಿಕೆ ದಿನ ಓಪನ್ ಮಾಡಲಾಗುತ್ತದೆ. 
 
 ಇನ್ನೂ ಬೆಂಗಳೂರಿನಲ್ಲಿ ಬೆಂಗಳೂರಿನ  80 ವರ್ಷ ಮೇಲ್ಪಟ್ಟ ಮತದಾರರು ಎಷ್ಟಿದ್ದಾರೆ ಅಂತ ನೋಡೋದಾದ್ರೆ
 
- ಕೇಂದ್ರ ವಲಯ- 1995
- ಉತ್ತರ- 2298
- ದಕ್ಷಿಣ- 2530
- ಡಿಸಿ ಅರ್ಬನ್-2329
ಒಟ್ಟು- 9152 ಮತದಾರರಿದ್ದಾರೆ. 
 
 
 
 ಇಂದಿನಿಂದ ಏಪ್ರಿಲ್ 6 ರವರೆಗೆ ಪ್ರತೀ ದಿನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಮತದಾನ ನಡೆಯಲಿದ್ದು, ಪ್ರತೀ ಮನೆಯಲ್ಲಿ ಕೂಡ ಸುಮಾರು 45 ನಿಮಿಷಗಳ  ಒಳಗೆ ಮತದಾನ ನಡೆಯುತ್ತದೆ. ಮೊದಲು ಡಮ್ಮಿ ಬ್ಯಾಲೆಟ್ ಪೇಪರ್ ಅಲ್ಲಿ ಮತ ಚಲಾವಣೆ ಬಗ್ಗೆ ಅಧಿಕಾರಿಗಳು ಮತದಾರರಿಗೆ ಮಾಹಿತಿ ಕೊಡುತ್ತಾರೆ. ಪ್ರತೀ ಕ್ಷೇತ್ರದಲ್ಲಿ ಪ್ರತೀ ಅಭ್ಯರ್ಥಿಯ ಕಡೆಯಿಂದ ಇಬ್ಬರು ಏಜೆಂಟ್ ಸ್ಥಳದಲ್ಲಿ ಹಾಜರಿರುತ್ತಾರೆ. ಮನೆಯವರೆಗೆ ಹೋಗಲು ಅವಕಾಶ ಇರುತ್ತೆ , ಆದ್ರೆ ಮನೆ ಒಳಗಡೆ ಇವರು ಕೂಡ ಹೋಗುವ ಹಾಗಿಲ್ಲ. 
 
 ಒಟ್ಟಿನಲ್ಲಿ ಚುನಾವಣಾ ಆಯೋಗದ ಈ  ನೂತನ ಪ್ರಯೋಗ ಮೊದಲ ದಿನ ಯಶಸ್ಸು ಕಂಡಿದ್ದು, ಏಪ್ರಿಲ್ 6 ರವರೆಗೆ ನಡೆಯಲಿದೆ. ಸಾಲುಗಟ್ಟಿ ನಿಲ್ಲುವ ಜನಗಳ ಮಧ್ಯೆ ಹೋಗಿ ವೋಟ್ ಹಾಕಿ ಬರುವುದಕ್ಕಿಂತ ಮನೆಯಲ್ಲಿಯೇ ಇರೋಣ ಅಂತೀರೋ ವೃದ್ಧರು, ಅಂಗವಿಕಲರಿಗೆ ಚುನಾವಣಾ ಆಯೋಗದ ಹೊಸ ಪ್ಲಾನ್ ಈಗ ನಿಟ್ಟುಸಿರು ಬಿಡುವಂತಾಗಿರೋದು ಸುಳ್ಳಲ್ಲ. ಎಂಬುವಂತಾಗಿದ್ದು ಇಂದಿನಿಂದ ಮನೆ ಮತದಾನದ ಈ  ಹೊಸ ಯೋಜನೆಗೆ ಮತದಾನ ಶುರುವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ