ಇದುವರೆಗೆ ಚರ್ಚೆ ಮಾಡಿಲ್ಲ. ನಾವು ಪಕ್ಷ ಕಟ್ಟಿದ್ರೂ ಸೇರಲ್ಲ ಎಂದು ಬಿಜೆಪಿ ನಾಯಕ ಕುಮಾರ ಬಂಗಾರಪ್ಪ ಹೇಳಿದರು.
ಇಂದು ಈ ಬಗ್ಗೆ ಮಾತನಾಡಿದ ಅವರು, ಯತ್ನಾಳ್ ಅವರ ಮಾತಿನಲ್ಲಿ ಹೊಸ ಪಕ್ಷ ಕಟ್ಟುತ್ತೇನೆ ಎಂದು ಹೇಳಿದ ಹಾಗಿಲ್ಲ. ಅವರು ಹೇಳಿರುವುದು ವಿಜಯದಶಮಿವರೆಗೆ ಸಮೀಕ್ಷೆಗಳನ್ನು ಮಾಡಿ, ಆ ಮೇಲೆ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇನೆ ಎಂದು ಅವರು ಹೇಳಿರುವುದು ಎಂದು ಸ್ಪಷ್ಟನೆ ನೀಡಿದರು.
ಒಂದು ವೇಳೆ ಪಕ್ಷ ಕಟ್ಟಿದ್ರೂ ನಾವು ಆ ಪಕ್ಷವನ್ನೂ ಸೇರುವುದಾಗಲಿ, ಬಿಜೆಪಿ ಪಕ್ಷ ಬಿಡುವುದಾಗಲಿ, ಆ ಪಕ್ಷದ ಜತೆಗೆ ನಮಗೆ ಯಾವುದೇ ಸಂಬಂಧವಿಲ್ಲ ಎಂದರು.
ಯತ್ನಾಳ್ ಅವರು ಸಿಕ್ಕ ಸಂದರ್ಭದಲ್ಲಿ ಅವರ ಬಳಿ ಬಿಜೆಪಿ ನಾಯಕರು ಮಾತುಕತೆ ನಡೆಸಲಿದ್ದಾರೆ ಎಂದರು.