ಎರಡು ಸಿಡಿ ಫ್ಯಾಕ್ಟರಿಗಳಿಂದ ರಾಜಕಾರಣಿಗಳ ಬ್ಲ್ಯಾಕ್‌ಮೇಲ್: ಬಸನಗೌಡ ಪಾಟೀಲ್ ಹೊಸ ಬಾಂಬ್‌

Sampriya

ಭಾನುವಾರ, 30 ಮಾರ್ಚ್ 2025 (12:10 IST)
Photo Courtesy X
ಬೆಂಗಳೂರು: ಎರಡು  ಸಿಡಿ ಫ್ಯಾಕ್ಟರಿಗಳು ರಾಜ್ಯದ ರಾಜಕಾರಣಿಗಳನ್ನು ಟಾರ್ಗೇಟ್ ಮಾಡಿ ರಾಜಕಾರಣಿಗಳ ನೈತಿಕ ಹಾಗೂ ಮಾನಸಿಕ ನೆಮ್ಮದಿಯನ್ನು ಕೆಡವುತ್ತಿದ್ದಾರೆಂದು ಬಿಜೆಪಿಯಿಂದ ಉಚ್ಛಾಟನೆಗೊಂಡ ಶಾಸಕ ಬಸನಗೌಡ ಪಾಟೀಕ್ ಹೊಸ ಬಾಂಬ್ ಸಿಡಿಸಿದರು.

ಇಂದು ಮಾಧ್ಯಮದವರು ಹನಿಟ್ರ್ಯಾಪ್ ಯತ್ನದ ಬಗ್ಗೆ ಸಚಿವ ರಾಜಣ್ಣ ಅವರು ಆರೋಪದ ಬಗ್ಗೆ ಪ್ರಶ್ನಿಸಿದಾಗ, ಹನಿಟ್ರ್ಯಾಪ್ ಪ್ರಕರಣದಲ್ಲಿ ಎರಡು ಫ್ಯಾಕ್ಟರಿಗಳು ಕೆಲಸ ಮಾಡಿದೆ. ಇದರ ಹಿಂದೆ ಮಹಾನಾಯಕರಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಸೂಕ್ತ ತನಿಖೆ ಮಾಡಬೇಕೆಂದರು..

ರಾಜಣ್ಣ, ರಮೇಶ್ ಜಾರಕಿಹೊಳಿ ಅವರು  ಅವರು ಪರಿಶಿಷ್ಟ ಪಂಗಡದ ನಾಯಕರು. ಬ್ಲ್ಯಾಕ್‌ಮೇಲ್‌ಗೆ ಈಗಾಗಲೇ ರಮೇಶ್ ಜಾರಕಿಹೊಳಿ ಬಲಿಪಶುವಾಗಿದ್ದಾರೆ. ಎಸ್‌ಎಸ್‌ಟಿ ಜನಾಂಗದವರಿಗೆ ಸುರಕ್ಷತೆ ಕೊಡುತ್ತೇವೆಂದ ಸಿಎಂ ಸಿದ್ದರಾಮಯ್ಯನವರು ತಮ್ಮ ಬಲಗೈ ಬಂಟನ ಮೇಲೆಯೇ ಇದೀಗ ಸಿಡಿ ಮಾಡುವ ಯತ್ನವಾಗಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಿ, ತಪ್ಪಿತಸ್ಥರನ್ನು ಕಂಡುಹಿಡಿಯಬೇಕೆಂದರು.  

ಎರಡು ಸಿಡಿ ಪ್ಯಾಕ್ಟರಿಗಳು ಎಷ್ಟೋ ರಾಜಕಾರಣಿಗಳ ನೈತಿಕ ಹಾಗೂ ಮಾನಸಿಕ  ನೆಮ್ಮದಿಯನ್ನು ಕೆಡವುತ್ತಿದ್ದಾರೆ. ಬಿಜೆಪಿಯ ವಿಜಯೇಂದ್ರ ಅವನ್ನದ್ದು ಒಂದು ಟೀಂ ಇದೇ. ಬಿಜೆಪಿ ಸಾಮಾಜಿಕ ಜಾಲತಾಣದ ಎಡಿಟರ್‌, ಹೆಡ್ ಅವನೇ ಆಗಿದ್ದಾನೆ.  ಇನ್ನೂ ಕಾಂಗ್ರೆಸ್‌ನಲ್ಲಿ ಸಿಡಿ ಫ್ಯಾಕ್ಟರಿಯ ಕಿಂಗ್ ಡಿಕೆ ಶಿವಕುಮಾರ್‌ ಎಂದು ಆರೋಪ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ