2018 -19 ಸಾಲಿನಲ್ಲಿ 10 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೆ ಕೆಲವರಿಗೆ ಇನ್ನು ಪರಿಹಾರ ಹಣ ಕೊಟ್ಟಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಯಾದಗಿರಿಯಲ್ಲಿ ಮಾತನಾಡಿದ ಅವರು, ಯಾದಗಿರಿ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದ್ದು,
ಬಿತ್ತನೆ ಪ್ರಮಾಣ ಕಡಿಮೆಯಾಗಿದೆ, ಕಡೆಚೂರ- ಬಾಡಿಗಾಳ ಕೈಗಾರಿಕೆ ಸ್ಥಾಪನೆ ಮಾಡುವಲ್ಲಿ ಸರಕಾರ ನಿಷ್ಕಾಳಜಿ ತೋರಿದೆ. ಕೊನೆ ಭಾಗದ ಕಾಲುವೆ, ಹಾಗೂ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆಡಳಿತ ಪಕ್ಷ ಜನರ ಸಮಸ್ಯೆ ಆಲಿಸುತ್ತಿಲ್ಲ ಎಂದು ದೂರಿದರು.
ಸಾಲ ಮನ್ನಾ ಮಾಡುತ್ತೆನೆಂದು ಹೇಳಿದ ಸಿಎಂ ಕುಮಾರಸ್ವಾಮಿ ಮಾತು ತಪ್ಪಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದೆ. 10 ಸಾವಿರ ಕೋಟಿ ಬಾಕಿ ಬಿಲ್ಲ ಇದೆ. ಹೀಗಾಗಿ ಕೆಲಸ ಮಾಡಲು ಗುತ್ತಿಗೆದಾರರು ಅಭಿವೃದ್ಧಿ ಕಾರ್ಯಮಾಡಲು ಮುಂದೆ ಬರುತ್ತಿಲ್ಲ ಎಂದರು.
13 ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಸಿಎಂ ಹಾಗೂ ಕೃಷಿ ಸಚಿವರು ಪ್ರವಾಸ ಮಾಡುತ್ತಿಲ್ಲ, ಅವರಿಗೆ ವರ್ಗಾವಣೆ ಒಂದು ದಂಧೆಯಾಗಿದೆ ಎಂದು ಟೀಕಿಸಿದರು.