DGP Om Prakash murder: ನಿವೃತ್ತ ಡಿಜಿಪಿ ಓಂ ಪ್ರಕಾಶ್ ಪತ್ನಿಗಿತ್ತು ಈ ಮಾನಸಿಕ ಕಾಯಿಲೆ
ಓಂ ಪ್ರಕಾಶ್ ತಮಗೆ ಮತ್ತು ಮಗಳಿಗೆ ಗನ್ ತೋರಿಸಿ ಶೂಟ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಪಲ್ಲವಿ ಈಗಾಗಲೇ ಐಪಿಎಸ್ ಅಧಿಕಾರಿಗಳ ಫ್ಯಾಮಿಲಿ ಗ್ರೂಪ್ ನಲ್ಲಿ ಮೆಸೇಜ್ ಮಾಡಿದ್ದರಂತೆ. ಕೃತ್ಯ ನಡೆದ ದಿನವೂ ಓಂ ಪ್ರಕಾಶ್ ತಮ್ಮ ಮೇಲೆ ಗುಂಡು ಹಾರಿಸುವುದಾಗಿ ಗನ್ ತೋರಿಸಿ ಬೆದರಿಸಿದ್ದರು. ನಮ್ಮ ಆತ್ಮರಕ್ಷಣೆಗಾಗಿ ಚಾಕುವಿನಿಂದ ಇರಿದೆ ಎಂದು ಪಲ್ಲವಿ ಪೊಲೀಸರ ಬಳಿ ಹೇಳಿಕೊಂಡಿದ್ದರು.
ಆದರೆ ಪಲ್ಲವಿಗೆ ಸ್ಕೀಝೋಫ್ರೀನಿಯಾ ಎಂಬ ಮಾನಸಿಕ ಕಾಯಿಲೆ ಇದೆ ಎಂಬ ಅಂಶ ಹೊರಬಿದ್ದಿದೆ. ಈ ಕಾಯಿಲೆ ಇರುವ ವ್ಯಕ್ತಿ ಇಲ್ಲದ ವಿಚಾರವನ್ನು ಇದೆ ಎಂದು ಊಹೆ ಮಾಡಿಕೊಳ್ಳುತ್ತಾರೆ. ಕಲ್ಪನೆಯ ವ್ಯಕ್ತಿಯೊಂದಿಗೆ ಮಾತನಾಡುವುದು ಮಾಡುತ್ತಾರೆ. ಇದೇ ಕಾರಣಕ್ಕೆ ಓಂ ಪ್ರಕಾಶ್ ಬಗ್ಗೆಯೂ ಆಕೆ ಇಲ್ಲಸಲ್ಲದ ವಿಚಾರವನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದಿರಬಹುದು ಎನ್ನಲಾಗುತ್ತಿದೆ. ಈಗ ಪೊಲೀಸರು ತನಿಖೆ ನಡೆಸುತ್ತಿದ್ದು ಮತ್ತಷ್ಟು ಸತ್ಯಗಳು ಹೊರಬೀಳುವ ನಿರೀಕ್ಷೆಯಿದೆ.