ಸರ್ಕಾರಿ ಗೌರವದೊಂದಿಗೆ ಇಂದು ಖಮರುಲ್ ಇಸ್ಲಾಂ ಅಂತ್ಯಕ್ರಿಯೆ
ಮಂಗಳವಾರ, 19 ಸೆಪ್ಟಂಬರ್ 2017 (12:22 IST)
ಕಲಬುರ್ಗಿ: ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಪಾರ್ಥಿವ ಶರೀರ ಇಲ್ಲಿನ ನೊಬೆಲ್ ಶಾಲೆಯ ಬಳಿ ಇರುವ ಖಮರುಲ್ ಅವರ ಮನೆಗೆ ಪಾರ್ಥಿವ ಶರೀರ ತಲುಪಿದೆ.
ಅವರ ಮನೆಯಲ್ಲಿ ಇಸ್ಲಾಂ ಧರ್ಮದ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಯಿತು. ಬಳಿಕ ತೆರೆದ ವಾಹನದಲ್ಲಿ ಎಮ್.ಎಸ್.ಕೆ.ಮಿಲ್, ಜಿಲಾನಾಬಾದ್, ಆಳಂದ ಚೆಕ್ ಪೋಸ್ಟ್, ಹುಮನಾಬಾದ್ ರಿಂಗ್ ರೋಡ್ ಮಾರ್ಗವಾಗಿ ಮುಸ್ಲಿಂ ಚೌಕ್ ನಲ್ಲಿರುವ ಕೆಸಿಟಿ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ಗಂಟೆವರೆಗೆ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ನಂತರ ಮೈದಾನದಲ್ಲಿ ಸರ್ಕಾರಿ ಗೌರವ ಮತ್ತು ನಮಾಜ್ ಸಲ್ಲಿಸಲಾಗುವುದು. ಬಳಿಕ ಜಿಲ್ಲಾ ನ್ಯಾಯಾಲಯ ಹಿಂಭಾಗದ ಖಲಂದರ್ ಖಾನ್ ಖಬರಿಸ್ಥಾನದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.
ಗಣ್ಯರ ಸಂತಾಪ
ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವ ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ಖರ್ಗೆ, ಶಾಸಕ ಮಾಲಿಕಯ್ಯ ಗುತ್ತೇದಾರ್ ಸೇರಿ ಹಲವು ಮುಖಂಡರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.