ಒಂದೇ ದಿನಕ್ಕೆ ಎಕ್ಸಾಸ್ಟ್ ಆಗಿದ್ದಾರೆ ಇನ್ನಷ್ಟು ಎಕ್ಸಾಸ್ಟ್ ಆಗಲಿ-ಡಿಕೆಶಿ

ಸೋಮವಾರ, 14 ಆಗಸ್ಟ್ 2023 (16:00 IST)
ಗುತ್ತಿಗೆದಾರರು ಯು ಟರ್ನ್ ವಿಚಾರವಾಗಿ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದು,ನಾನು ಗುತ್ತಿಗೆದಾರರ ಬಗ್ಗೆ ಮಾತಾಡಲ್ಲ.ಅವರನ್ನ ಬಿಡಿ, ಅವರು ಕಷ್ಟದಲ್ಲಿ ಇದ್ದಾರೆ.ಆದರೆ ಅವರನ್ನು ಬಳಸಿಕೊಂಡರಲ್ಲ.ಅವರನ್ನು ಬಳಸಿಕೊಂಡ ನವರಂಗಿ ನಾರಾಯಣ್, ಅದ್ಯಾವುದೋ ರವಿ, ಮಹಾಲಕ್ಷ್ಮಿ ಲೇಔಟ್ ಗೋಪಾಲಸ್ವಾಮಿ ಇವರ ಬಗ್ಗೆಯೆಲ್ಲ ಮಾತಾಡಬೇಕಿದೆ ಮಾತಾಡ್ತೀನಿ.ಒಬ್ಬೊಬ್ಬರಾಗಿ ಬರ್ತಾ ಇದ್ದಾರೆ ನನ್ನ ಹತ್ರ.ಮುನಿರತ್ನ ಬಂದು ಏನೇನೊ ಹೇಳಿಕೊಂಡರು.ಚಿಕ್ಕಪೇಟೆ ಶಾಸಕರು ಬಂದು ಅವರದ್ದು ಏನೇನೂ ಮಾತನಾಡಿದ್ರು.ನಮ್ಮ ಅಜ್ಜಯ್ಯನ ಸಹವಾಸ ಇವರಿಗೆಲ್ಲ ಗೊತ್ತಿಲ್ಲ.ದಾಖಲೆಗಳ ಬಿಡುಗಡೆ ವಿಷಯ ಈಗ ಬೇಡ.ನವರಂಗಿದೂ ಗೊತ್ತಿದೆ, ಸಾಮ್ರಾಟನದ್ದೂ ಗೊತ್ತಿದೆ.ಒಂದೇ ದಿನ ಎಲ್ಲ ದಾಖಲೆ ಬಿಡುಗಡೆ ಬೇಡ.ಒಂದೇ ದಿನಕ್ಕೆ ಎಕ್ಸಾಸ್ಟ್ ಆಗಿದ್ದಾರೆ ಇನ್ನಷ್ಟು ಎಕ್ಸಾಸ್ಟ್ ಆಗಲಿ ಎಂದು ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ