ಬಿಡಿಎ ಅಧಿಕಾರಿಗಳಿಗೆ ಹಲವು ಸೂಚನೆ ಕೊಟ್ಟಿದ್ದೇನೆ-ಡಿಕೆಶಿ

ಶನಿವಾರ, 12 ಆಗಸ್ಟ್ 2023 (21:30 IST)
ಬಿಡಿಎ ಅಧಿಕಾರಿಗಳ ಸಭೆ ಬಳಿಕ ಡಿಸಿಎಂ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದು,ಸುಪ್ರೀಂಕೋರ್ಟ್ ಮಾನಿಟರಿಂಗ್ ಮಾಡಿರೋ ಕಮಿಟಿ ಜೊತೆ ಚರ್ಚೆ ಮಾಡಿದ್ದೇನೆ.ಬಿಡಿಎ ಅಧಿಕಾರಿಗಳಿಗೆ ಹಲವು ಸೂಚನೆ ಕೊಟ್ಟಿದ್ದೇನೆ.ಜಮೀನು ಕಳೆದುಕೊಂಡ ರೈತರಿಗೆ ಮೊದಲು ನಿವೇಶನ ಕೊಡಬೇಕು ಅಂತ ಸೂಚನೆ ನೀಡಲಾಗಿದೆ.ಈ ಬಡಾವಣೆಯಲ್ಲಿ ಕ್ರೀಡಾಂಗಣ ಬರಲಿದೆ.ಈಗ ಗುರುತಿಸಿರೋ ಜಾಗ ಸರಿಯಿಲ್ಲ.ಕ್ರಿಕೆಟ್ ಸ್ಟೇಡಿಯಂ ಮಾಡೋಕೆ ಜಾಗ ಇದೆ. ಈಗ ಗುರುತಿಸಿರೋ ಜಾಗ ಸರಿಯಿಲ್ಲ.ಇದಕ್ಕೆ ಬೇರೆ ಜಾಗ ಗುರುತಿಸಲು ತಿಳಿಸಲಾಗಿದೆ ಅಂತಾ ಡಿಕೆಶಿವಕುಮಾರ್ ಹೇಳಿದ್ದಾರೆ.
 
45 ಮೀಟರ್ ರೋಡ್ ಆಗಬೇಕು. ಅ ರೋಡ್ ಪಕ್ಕ ಪಾರ್ಕ್ ಇರಬೇಕು. ಅದರ ಪಕ್ಕ ಸ್ಟೇಡಿಯಂ ಮಾಡಬೇಕು‌ ಇದಕ್ಕೆ ಜಾಗ ಗುರುತಿಸಲು ಹೇಳಿದ್ದೇನೆ.ನಿವೇಶನ ಹಂಚಿಕೆ ಮಾಡೋವಾಗ ಕಮರ್ಷಿಯಲ್ ಅವರಿಗೆ ಕೊಡೋವಾಗ ರೋಡ್ ಪಕ್ಕದ ನಿವೇಶನ ಕೊಡಬಾರದು ಅಂತ ಸೂಚನೆ ಕೊಡಲಾಗಿದೆ.ಇದಕ್ಕಾ ಪಾಲಿಸಿ ತರಲು‌ ಸೂಚನೆ ನೀಡಿದ್ದಾರೆ.ಜಾಗ ಕಳೆದುಕೊಂಡಿರೋ ರೈತರಿಗೆ ನ್ಯಾಯ ಸಿಗಬೇಕು.ಅದಕ್ಕೆ ಬೇಕಾದ ಕ್ರಮ ತೆಗೆದುಕೊಳ್ತೀವಿ.ಸದ್ಯ 2500 ಎಕರೆ ಬಡಾವಣೆ ಅಭಿವೃದ್ಧಿ ಆಗ್ತಿದೆ.ಅಭಿವೃದ್ಧಿ ಆದ ಕೂಡಲೇ ಸೈಟ್ ಹಂಚಿಕೆ ಪ್ರಾರಂಭ ಮಾಡ್ತೀವಿ.ಮುಂದೆ ಐಟಿ ಪಾರ್ಕ್ ಬರಬಹುದು.ಇದಕ್ಕೆಲ್ಲ ಅನುಕೂಲ ಆಗೋ ರೀತಿ ಅಭಿವೃದ್ಧಿ ಮಾಡಬೇಕು ಅಂತ ಸೂಚನೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ