ಟೊಮೆಟೋ ಬೆಲೆ ಇಳಿಕೆಯಾಗಲ್ಲ ಎಂದು ತಜ್ಞರ ಭವಿಷ್ಯ

ಭಾನುವಾರ, 16 ಜುಲೈ 2023 (14:30 IST)
ಟೊಮೆಟೋ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.ಟೊಮೆಟೋ ಬೆಲೆ ಇಳಿಕೆಯಾಗುವ ಲಕ್ಷಣ ಕಾಣ್ತಿಲ್ಲ.ಕೆಜಿಗೆ 300 ರೂ ಏರಿಕೆ ಸಂಭವ ಇದೆ ಎಂದು ತಜ್ಞರು ನುಡಿದಿದ್ದಾರೆ.
 
ಟೊಮೆಟೋ ಬೆಲೆ ಇಳಿಕೆಯಾಗಲಿದೆ ಎನ್ನಲಾಗುತ್ತಿತ್ತು.ಆದ್ರೆ ದೇಶದೆಲ್ಲೆಡೆ ಟೊಮೆಟೋ ಬೆಲೆ ಗಗನಕ್ಕೇರಿದೆ.ಮುಂಬರುವ ದಿನಗಳಲ್ಲಿ ಒಂದು ಕೆಜಿಗೆ 300 ರೂ ತಲುಪುವ ಸಾಧ್ಯತೆ ಇದೆ ಎಂಬುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಉತ್ತರ ಭಾರತದಲ್ಲಿ ಸುಳಿಯುತ್ತಿರುವ ಮಳೆಯ ಹಾಗೂ ಹವಾಮಾನ ವೈಪರಿತ್ಯವೇ ಟೊಮೆಟೋ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ.ಮಳೆಯಿಂದಾಗಿ ಕರ್ನಾಟಕ, ಮಹಾರಾಷ್ಟ್ರದಲ್ಲಿ ವೈರಸ್ ಸೋಂಕಿಗೆ ಟೊಮೆಟೋ ಬೆಳೆ ನಾಶಗೊಂಡಿದ್ದರ ಪರಿಣಾಮವೂ ಬೆಲೆ ಏರಿಕೆಯಾಗಿದೆ.ಇನ್ನೂ ಕೆಲ ಪ್ರದೇಶಗಳಲ್ಲಿ ಬರದಿಂದಾಗಿ ಕೈಗೆ ಬಂದ ಫಸಲು ಹಾಳಾದ ಕಾರಣದಿಂದಲೂ ಟೊಮೆಟೋ ದರ ದುಬಾರಿಯಾಗಿದೆ.ಸದ್ಯಕ್ಕೆ ಟೊಮೆಟೋ ಬೆಲೆ ಇಳಿಕೆ ಆಗಲ್ಲ, ಇನ್ನೂ 300 ರೂವರೆಗೆ ಕೆಜಿಗೆ ಏರಿಕೆಯಾಗುವ ಸಂಭವವಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ