ಉಚಿತ ಪ್ರಯಾಣಕ್ಕೆ ಸ್ತ್ರೀಯರಿಗೆ ಮೆಟ್ರೋ ರೀತಿ ಸ್ಮಾರ್ಟ್‌ಕಾರ್ಡ್ ನೀಡಲು ಸಾರಿಗೆ ಇಲಾಖೆ ಪ್ಲಾನ್ ಮಾಡಿದೆ.ಟಿಕೆಟ್ ನೀಡುವ ಕಿರಿಕಿರಿ ತಪ್ಪಿಸಲು ಮಾಮೂಲಿ ಸ್ಮಾರ್ಟ್‌ಕಾರ್ಡ್ ಬದಲು, ಟ್ಯಾಪ್ ಆಯಂಡ್ ಟ್ರಾವೆಲ್ ತಂತ್ರಜ್ಞಾನದ ಸ್ಮಾರ್ಟ್‌ಕಾರ್ಡ್ ನೀಡುವ ಕುರಿತು ಚಿಂತನೆ ನಡೆಸಿದೆ.ಈ ಯೋಜನೆ ದುಬಾರಿಯಾಗಲಿದ್ದು, ಆರ್ಥಿಕ ಪರಿಸ್ಥಿತಿಯನ್ನಾಧರಿಸಿ ಜಾರಿಗೆ ತರುವ ಬಗ್ಗೆ ಚರ್ಚೆ ನಡೆಸಲ್ಲಿದ್ದಾರೆ.
ಮೆಟ್ರೋ ಮಾದರಿಯ ಕಾರ್ಡುಗಳು ನೀಡಲು ಚಿಂತನೆ ನಡೆಸಿದ್ದು,ಮೆಟ್ರೋ ಮಾದರಿಯ ಸ್ಮಾರ್ಟ್ ಕಾರ್ಡ್‌ಗಳನ್ನು ಮಹಿಳಾ ಪ್ರಯಾಣಿಕರಿಗೆ ನೀಡುವ ಪ್ಲಾನ್ ಇದೆ.ಮಹಿಳೆಯರು ಬಸ್ ಹತ್ತುವಾಗ ಬಾಗಿಲಲ್ಲಿ ಅಳವಡಿಸುವ ಯಂತ್ರಕ್ಕೆ ಟ್ಯಾಪ್ ಮಾಡಿ ನಂತರ ಇಳಿಯುವಾಗ ಮತ್ತೊಮ್ಮೆ ಟ್ಯಾಪ್ ಮಾಡಬೇಕಿದೆ.ಆಗ ಮಹಿಳಾ ಪ್ರಯಾಣಿಕರು ಎಲ್ಲಿಂದ, ಎಲ್ಲಿಗೆ ಪ್ರಯಾಣಿಸಿದರು ಎಂಬ ನಿಖರ ಮಾಹಿತಿ ಪಡೆಯಬಹುದು.ಹೀಗಾಗಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡೋಕೆ ಸಾರಿಗೆ ಇಲಾಖೆ ಮುಂದಾಗಿದೆ.