ಯುವತಿಯನ್ನ ಬೆದರಿಸಿ ಹಣ ಸುಲಿಗೆ

ಮಂಗಳವಾರ, 29 ಆಗಸ್ಟ್ 2023 (17:03 IST)
ಮೆಡಿಕಲ್ ಸ್ಟೋರ್​ನಲ್ಲಿ ಯುವತಿಯನ್ನ ಬೆದರಿಸಿ ಹಣ ಸುಲಿಗೆ ಮಾಡಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರು ಹೊರವಲಯದ ಹೆಬ್ಬಗೋಡಿಯಲ್ಲಿ ನಡೆದಿದೆ. ಹೆಲ್ಮೆಟ್ ಧರಿಸಿ ಬಂದಿದ್ದ ಅಸಾಮಿ ಕೃತ್ಯ ಎಸಗಿದ್ದಾನೆ. ಕಿಡಿಗೇಡಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಡಹಗಲೇ ಮೆಡಿಕಲ್ ಸ್ಟೋರ್ ನುಗ್ಗಿದ ಅಸಾಮಿ, ಯುವತಿ ಒಬ್ಬಳೇ ಇರುವುದನ್ನ ಗಮನಿಸಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದಾನೆ. ಈ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ