ಜನರಿಗೆ ನಕಲಿ ಡಿಟಿಹೆಚ್ ಆಫರ್ ಹೇಳಿ ಹಣ ಪಡೆದು ವಂಚನೆ

ಶನಿವಾರ, 24 ಏಪ್ರಿಲ್ 2021 (09:38 IST)
ಬೆಂಗಳೂರು : ಡಿಟಿಎಚ್ ಟೆಲಿವಿಷನ್ ಸಂಪರ್ಕದ ಸೇವಾ ಪೂರೈಕೆದಾರರಿಂದ ಎಂದು ಹೇಳಿಕೊಂಡು ಕರೆ ಮಾಡಿ ಸಾಂಕ್ರಾಮಿಕ ರೋಗದಿಂದಾಗಿ ಕೆಲವು ವರ್ಷಗಳ ಉಚಿತ ವಾರ್ಷಿಕ ಚಂದಾದಾರಿಕೆ ನೀಡುವ ಆಫರ್ ಬಗ್ಗೆ ತಿಳಿಸಿ ಜನರಿಂದ ಹಣ ಪಡೆದು  ವ್ಯಕ್ತಿಯೊಬ್ಬ ಮೋಸಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗ್ರಾಹಕರಿಗೆ ನಕಲಿ ಆಫರ್ ಬಗ್ಗೆ ತಿಳಿಸಿ ಜನರಿಂದ ಸಾವಿರಾರು ರೂ.ಹಣವನ್ನು  ತಮ್ಮ ಅಕೌಂಟ್ ಗೆ ವರ್ಗಾಯಿಸಿಕೊಂಡು ಬಳಿಕ ಅವರ ಕರೆಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಈ ಹಿನ್ನೆಯಲ್ಲಿ ಕೆಲವರು ಡಿಟಿಎಚ್ ಆಫೀಸ್ ಗೆ ಬಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದ ಸನ್ ಡೈರೆಕ್ಟ್ ನ ಮ್ಯಾನೇಜ್ ಮೆಂಟ್ ಗ್ರಾಹಕರ ಪಟ್ಟಿಯನ್ನು ಸಿದ್ಧಪಡಿಸಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ