ಸರಕಾರದ ವಿರುದ್ಧ ರೈತ ಸಂಘ ಗರಂ; ಮತ್ತೆ ಹೋರಾಟದ ಹಾದಿಯತ್ತ...

ಶನಿವಾರ, 4 ಮೇ 2019 (17:02 IST)
ಯಾವುದೇ ಸರ್ಕಾರ ಬಂದರೂ ರೈತರ ಸಮಸ್ಯೆ ಕೇಳುತ್ತಿಲ್ಲ. ರೈತರು ಮೊದಲು ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಲಾಗಿದೆ. 

ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದು, ರೈತರು ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು. ಇಲ್ಲವಾದರೆ ಸರ್ಕಾರಗಳು ರೈತರನ್ನ ಕಡೆಗಣಿಸುತ್ತವೆ. ರಾಜ್ಯ ಸರ್ಕಾರ  ಸರಿಯಾಗಿ ಸಲಾಮನ್ನಾ ಮಾಡಿಲ್ಲ ಎಂದು ದೂರಿದ್ರು.

ರೈತರ ಕಬ್ಬು, ಭತ್ತದ ಹಣವನ್ನ ಬ್ಯಾಂಕುಗಳು ಸಾಲಕ್ಕಾಗಿ  ಜಮಾ ಮಾಡಿಕೊಳ್ಳುತ್ತಿವೆ. ಯಾವುದೇ ಬ್ಯಾಂಕ್ ಗಳು ಸರ್ಕಾರದ ನೀತಿಯನ್ನ ಪಾಲಿಸುತ್ತಿಲ್ಲ. ರೈತರ ಕಬ್ಬಿಗೆ ಎಫ್ ಆರ್ ಪಿ ದರ ಸಿಗುತ್ತಿಲ್ಲ. ರಾಜ್ಯದ ವಿವಿಧ ಕಾರ್ಖಾನೆಗಳಿಂದ 4 ಸಾವಿರ ಕೋಟಿ ರೂ. ಹಣ ರೈತರಿಗೆ ಬರಬೇಕಿದೆ. ಹಣ ಬರದೇ ರೈತರು ಸಂಕಷ್ಟಕ್ಕೆ‌ ಸಿಲುಕಿದ್ದಾರೆ ಎಂದರು.

ಈಗ ಬರಗಾಲ ಬೇರೆ ಬಂದಿದೆ. ಸಹಜವಾಗಿಯೇ ರೈತರು ಮತ್ತಷ್ಟು ಕಷ್ಟಕ್ಕೆ ಒಳಗಾಗಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ರೈತರಿಗೆ ಹಣ ಕೊಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ