ಆಂಧ್ರದ ಕಾಲುವೆ ಒಡೆಯುತ್ತೇವೆ ಎಂದ ರೈತರು!

ಭಾನುವಾರ, 23 ಡಿಸೆಂಬರ್ 2018 (16:19 IST)
ಕರ್ನಾಟಕದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾರ್ಚ್ 30 ರವರೆಗೆ ಎಲ್ ಎಲ್ ಸಿ ಕಾಲುವೆಗೆ ನೀರು ಬಿಡುವಂತೆ ತುಂಗಭದ್ರಾ ರೈತ ಸಂಘ ಆಗ್ರಹಿಸಿದೆ.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ಅವರು, ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ತುಂಗಭದ್ರಾ ಜಲಮಂಡಳಿ ಅಧಿಕಾರಿಗಳು ಈ ಕುರಿತು ಈಗಾಗಲೇ ನವೆಂಬರ್ 18 ರಂದು ಸಭೆ ನಡಸಿದ್ದಾರೆ.

ಎಲ್ ಎಲ್ ಸಿ ಕಾಲುವೆಯಾಶ್ರಿತ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಡಿಸೆಂಬರ್ 26 ರಿಂದ ಮಾರ್ಚ್ 30 ರವರೆಗೆ ಆಂಧ್ರ-ಕರ್ನಾಟಕದ ಜಂಟಿ ನೀರು ಬಿಡಲು ನಿರ್ಧರಿಸಲಾಗಿದೆ. ಒಂದು ವೇಳೆ ಈ ನಿರ್ಧಾರದ ಬದಲು ಕರ್ನಾಟಕಕ್ಕೆ ನೀರು ಬಿಡದೇ ಹೋದರೆ ಆಂಧ್ರದ ಯರಗುಡಿ ಭಾಗದ 135 ಕಿ.ಮೀ. ನಲ್ಲಿ ಎಲ್ ಎಲ್ ಸಿ ಕಾಲುವೆ ಒಡೆಯುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ