ಮದುವೆಗೆ ಹೆಣ್ಣು ಸಿಗುತ್ತಿಲ್ಲವೆಂದು ಪ್ರತಿಭಟನಾ ಜಾಥಾ ಮಾಡಲಿರುವ ರೈತರು!
ರೈತರಿಗೆ ಮದುವೆಯಾಗಲು ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ ಎಂದು ಬೇಸತ್ತ 30 ದಾಟಿದ ರೈತರ ಗುಂಪು ಮುಂದಿನ ತಿಂಗಳು ಪಾದಯಾತ್ರೆ ಮಾಡಿ ಹೆಣ್ಣು ಹೆತ್ತವರ ಗಮನ ಸೆಳೆಯಲು ತೀರ್ಮಾನಿಸಿದ್ದಾರೆ.
ನಾವು ರೈತರು ಎಂಬ ಕಾರಣಕ್ಕೆ ಯಾರೂ ಹೆಣ್ಣು ಕೊಡುತ್ತಿಲ್ಲ. ನಮಗೆ ಹೆಣ್ಣು ಕೊಟ್ಟರೆ ರಾಣಿಯಂತೆ ನೋಡಿಕೊಳ್ಳುತ್ತೇವೆ. ಆದರೆ ಹೆಣ್ಣು ಹೆತ್ತವರು ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಹೀಗಾಗಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪಾದಯಾತ್ರೆ ಮಾಡಲು ತೀರ್ಮಾನಿಸಿರುವುದಾಗಿ ಪಾದಯಾತ್ರೆಯಲ್ಲಿ ಭಾಗಿಯಾಗಲಿರುವ ರೈತ ಸಂತೋಷ್ ಹೇಳಿದ್ದಾರೆ. ಇವರು ಕಳೆದ ಫೆಬ್ರವರಿಯಲ್ಲಿ ಇದೇ ಕಾರಣಕ್ಕೆ ಇದೇ ರೀತಿಯ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.